ಕಲಬುರಗಿ: ಯಾದಗಿರಿ ಜಿಲ್ಲೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಸಚಿವರಾದ ಶ್ರೀರಾಮುಲು ಮತ್ತು ಪ್ರಭು ಚೌವ್ಹಾಣ್ ಅವರು ಮಾತೆ ಮಾಣಿಕೇಶ್ವರಿ ದರ್ಶನ ಪಡೆದ್ರು.
ಮಾತೆ ಮಾಣಿಕೇಶ್ವರಿ ದರ್ಶನ ಪಡೆದ ಶ್ರೀರಾಮುಲು, ಪ್ರಭು ಚೌವ್ಹಾಣ್ - maate Manikeshwari
ಯಾದಗಿರಿ ಜಿಲ್ಲೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಸಚಿವರಾದ ಶ್ರೀರಾಮುಲು ಹಾಗೂ ಪ್ರಭು ಚೌವ್ಹಾಣ್ ಅವರು ಮಾತೆ ಮಾಣಿಕೇಶ್ವರಿ ದರ್ಶನ ಪಡೆದ್ರು.
ರಾಮುಲು,ಪ್ರಭು ಚೌವ್ಹಾಣ್
ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿರುವ ನಡೆದಾಡುವ ದೇವತೆಯೆಂದೇ ಪ್ರಸಿದ್ಧಿ ಪಡೆದಿರುವ ಮಾತೆ ಮಾಣಿಕೇಶ್ವರಿ ದರ್ಶನ ಪಡೆದು, ಬಿಜೆಪಿ ಸರ್ಕಾರ ಸುಭದ್ರವಾಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಪ್ರವಾಹ ಪೀಡಿತ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ್, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಎ ಬಿ ಮಾಲಕರೆಡ್ಡಿ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.
TAGGED:
maate Manikeshwari