ಕಲಬುರಗಿ :ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಮಿತಿ ಮೀರಿದೆ. ಬರೀ ಸುಳ್ಳು ಹೇಳಿ ಜನರನ್ನ ಮರಳು ಮಾಡುವುದರಲ್ಲಿ ಮಾತ್ರ ಮೋದಿ ನಿಸ್ಸೀಮ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಮೋದಿ ವಿರುದ್ಧ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿರುವುದು..
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ನಮ್ಮ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 100 ರಿಂದ 130 ಡಾಲರ್ ಇತ್ತು. ಆಗ ನಾವು ಲೀಟರ್ ಪೆಟ್ರೋಲ್ಗೆ 60 ರಿಂದ 70 ರೂ. ಗೆ ಕೊಡುತ್ತೇವೆ.
ಈಗ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 50 ರೂ. ಆಸುಪಾಸಿನಲ್ಲಿದೆ. ಆದರೂ ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಮೋದಿ ಒಂದೇ ಒಂದು ದಿನವೂ ತಯಾರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅವರದ್ದು ಚಿಲ್ಲರೆ ಮಾತು. ಅಂತಹ ಚಿಲ್ಲರೆ ಮಾತುಗಳಿಗೆ ಜಾಸ್ತಿ ಮಹತ್ವ ಕೊಡಬೇಡಿ. ಅವರು ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅಡ್ವಾಣಿ ಅವರಂತಹ ಹಿರಿಯರು ಎದುರು ಬಂದರೂ ನೋಡದೇ ಹೋಗುವ ಗುಣ ಮೋದಿ ಅವರದ್ದು ಎಂದು ಗುಡುಗಿದರು.
ಓದಿ:ಇಂದಿರಾಜಿ ಬಗ್ಗೆ ಮಾತನಾಡೋಕೆ ನೀವೇನು ಟಾಟಾ-ಬಿರ್ಲಾ ವಂಶಸ್ಥರೇ.. ಕಾರಜೋಳಗೆ ತಿಮ್ಮಾಪುರ ತಿರುಗೇಟು..