ಕಲಬುರಗಿ: ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಬಿಸಿಲ ನಗರಿ ಕೂಲ್ ಕೂಲ್ ಆಗಿದ್ದು, ಸೂರ್ಯನ ದರ್ಶನವಿಲ್ಲದೆ ಜನತೆ ಚಳಿಗೆ ತತ್ತರಿಸುವಂತಾಗಿದೆ.
ಕಲಬುರಗಿಯಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ... ಬಿಸಿಲ ನಗರಿ ಕೂಲ್ ಕೂಲ್ - Rain in kalaburagi
ಕಲಬುರಗಿ ಜಿಲ್ಲೆಯ ಹಲವೆಡೆ ಇಂದು ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮೋಡ ಕವಿದ ವಾತಾವರಣವಿದ್ದು, ಬಿಸಿಲ ನಗರಿ ಕೂಲ್ ಕೂಲ್ ಆಗಿದೆ.
ಮುಂಜಾನೆಯಿಂದ ಕಲಬುರಗಿಯಲ್ಲಿ ಮಳೆ
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಹಾಗೂ ಜನರು ಕೆಲಸಕ್ಕೆ ತೆರಳಲು ಮಳೆ ಅಡ್ಡಿಯುಂಟು ಮಾಡಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ತೊಗರಿ ಕಟಾವು ನಡೆದಿದ್ದು, ಮಳೆಯಿಂದ ಹಾನಿಗೊಳಗಾಗುವ ಭೀತಿ ಎದುರಾಗಿದೆ.