ಕಲಬುರಗಿ:ನಗರದಲ್ಲಿ ಇಂದು ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಶುರುವಾದ ಮಳೆ ನಿರಂತರವಾಗಿ ಬರುತ್ತಲೇ ಇದೆ.
ಕಲಬುರಗಿಯಲ್ಲಿ ಜಿಟಿಜಿಟಿ ಮಳೆ: ವ್ಯಾಪಾರ-ವಹಿವಾಟಿಗೆ ಹಿನ್ನಡೆ - kalaburgi rain fall
ತೊಗರಿ ನಾಡು ಕಲಬುರಗಿಯಲ್ಲಿ ವರುಣನಿಂದಾಗಿ ವ್ಯಾಪಾರ-ವಹಿವಾಟುಗಳಿಗೆ ಹಿನ್ನಡೆಯಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ಕಂಗಾಲಾದ ಜನರಿಗೆ ಬರೆ ಎಳೆದಂತಾಗಿದೆ.
ಕಲಬುರಗಿಯಲ್ಲಿ ಜಿಟಿಜಿಟಿ ಮಳೆ
ನಾಳೆ (ಆ.14) ಶ್ರಾವಣ ಮಾಸದ ಕೊನೆಯ ಶುಕ್ರವಾರ ಆಗಿದ್ದರಿಂದ ಲಕ್ಷ್ಮಿ ಪೂಜೆಗಾಗಿ ಮಾರುಕಟ್ಟೆಗೆ ಹೂ, ಹಣ್ಣು, ಬಾಳೆ, ಕಬ್ಬು ಬಂದಿದೆ. ಮಳೆ ಅಡ್ಡಿಯಿಂದಾಗಿ ವ್ಯಾಪಾರಕ್ಕೆ ಸಮಸ್ಯೆ ಉಂಟಾಗಿದೆ.
ಕೆಲ ಗ್ರಾಹಕರು ಜಿಟಿಜಿಟಿ ಮಳೆಯಲ್ಲಿಯೇ ಪೂಜಾ ಸಾಮಗ್ರಿ ಖರೀದಿಗೆ ಆಗಮಿಸುತ್ತಿದ್ದಾರೆ. ಕೊರೊನಾದಿಂದ ಕಂಗೆಟ್ಟ ವ್ಯಾಪಾರಿಗಳಿಗೆ ಮಳೆಯು ಶಾಪವಾಗಿ ಪರಿಣಮಿಸುತ್ತಿದೆ. ಇನ್ನೊಂದೆಡೆ ಈಗಾಗಲೇ ಹೆಸರು ರಾಶಿ ನಡೆದಿದ್ದು, ನಿರಂತರ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.