ಕರ್ನಾಟಕ

karnataka

ETV Bharat / state

ಕಲಬರುಗಿ ಜನರಿಗೆ ನೀರಿನ ಸಮಸ್ಯೆ ಎದುರಾಗದಂತೆ ಪಾಲಿಕೆ ಆಯುಕ್ತರ ಹೊಸ ಪ್ಲಾನ್​

ಕಲಬುರಗಿಯಲ್ಲಿ ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಕುಸಿತದಿಂದ ನೀರಿಗೆ ಹಾಹಾಕಾರ ಎದುರಾಗುತ್ತದೆ. ಇದನ್ನ ತಡಗಟ್ಟಲು ಮಹಾನಗರದ ಜನತೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಕರೆ ನೀಡಿದ್ದಾರೆ.

ನಗರದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಸರಿಸುವಂತೆ ಪಾಲಿಕೆ ಆಯುಕ್ತರ ಸೂಚನೆ

By

Published : Sep 27, 2019, 1:08 PM IST

ಕಲಬುರಗಿ:ನಗರದಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿಗಾಗಾಗಿ ಹಾಹಾಕಾರು ಉಂಟಾಗುತ್ತದೆ. ಈ ಸಮಸ್ಯೆ ತಡೆಗಟ್ಟಲು ಮಹಾನಗರ ಪಾಲಿಕೆ ಆಯುಕ್ತರು ಜನತೆಗೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ನಗರದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಸರಿಸುವಂತೆ ಪಾಲಿಕೆ ಆಯುಕ್ತರ ಸೂಚನೆ

ಸುದ್ದಿಗೋಷ್ಟಿ ನಡೆಸಿ‌‌ ಮಾತನಾಡಿದ ಅವರು, ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ನಗರದಲ್ಲಿ ಬೇಸಿಗೆ ಸಂದರ್ಭಲ್ಲಿ ಮಹಿಳೆಯರು, ಮಕ್ಕಳು ನೀರಿನ ಕೊಡ ಹಿಡಿದು ಓಡಾಡುವುದನ್ನು ಕಂಡಿದ್ದೇವೆ. ಕಲಬುರಗಿ ಜಿಲ್ಲೆ ಸಮತಟ್ಟ ಪ್ರದೇಶವಾಗಿರುವುದರಿಂದ ಇಲ್ಲಿಂದ ನೀರು ಹರಿದು ಹೋಗುವುದಿಲ್ಲ. ಇದನ್ನು ಸದ್ಬಳಿಕೆ ಮಾಡಿಕೊಂಡಲ್ಲಿ ಇಲ್ಲಿ ಅಂತರ್ಜಲ ವೃದ್ಧಿಸುವುದು ಕಷ್ಟದ ಕೆಲಸವೇನಲ್ಲ. ಸಂಗ್ರಹಣೆಯ ನೀರನ್ನು ನಗರದ ಉದ್ಯಾನವನಗಳಿಗೆ ಉಪಯೋಗಿಸಿದಲ್ಲಿ “ಗ್ರೀನ್ ಕಲಬುರಗಿ” ಮಾಡುವುದರ ಜೊತೆಗೆ ಪರಿಶುದ್ಧ ಗಾಳಿಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.

ನೀರು ಪೂರೈಸುವ ಜವಾಬ್ದಾರಿ ಸರ್ಕಾರದ್ದು ಎಂಬ ಮನೋಭಾವನೆ ಸಾರ್ವಜನಿಕರಲ್ಲಿ ಬದಲಾಗಬೇಕಿದೆ. ರಸ್ತೆ, ಚರಂಡಿಯಂತಹ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಬಹುದೇ ಹೊರತು ಜೀವ ಜಲವನ್ನು ಸೃಷ್ಠಿಸುವುದು ಅಸಾಧ್ಯ. ಹಾಗಾಗಿ ಸಾರ್ವಜನಿಕರು ನದಿ, ಕೆರೆ, ಬೋರ್​ಬೆಲ್ ಸೇರಿದಂತೆ ಜಲಮೂಲಗಳ ಸಂರಕ್ಷಣೆ ಅಭಿಯಾನಕ್ಕೆ ಪಾಲಿಕೆಯೊಂದಿಗೆ ಕೈಗಜೋಡಿಸಬೇಕೆಂದು ಅವರು ಕರೆ ನೀಡಿದರು.

ಟೆರೇಸ್ ಮೇಲೆ‌ ನೀರು ಸಂಗ್ರಹಣೆ

ಧಾರ್ಮಿಕ ಸ್ಥಳಗಳಲ್ಲಿ, ಶಾಪಿಂಗ್ ಮಾಲ್, ವಸತಿ ಪ್ರದೇಶದ ಬಹುಮಹಡಿ ಕಟ್ಟಡಗಳ ಮಾಲೀಕರು ತಮ್ಮ ಟೆರೇಸ್​ನಲ್ಲಿ ಮಳೆ ನೀರು ಸಂಗ್ರಹಣೆ ಮಾಡಿಕೊಂಡು ಅದನ್ನೇ ನವೀಕರಿಸಿ ಬಳಸಿಕೊಂಡಾಗ ನೀರು ಪೋಲಾಗುವುದನ್ನು ತಡೆಯಬಹುದು. ಹೊಸ ಮನೆಗಳನ್ನು ನಿರ್ಮಿಸುವವರು ಕಡ್ಡಾಯವಾಗಿ ಮಳೆನೀರು ಕೊಯ್ಲು ಮಾಡಲೇಬೇಕು. ಈಗಾಗಲೇ ಮನೆ ನಿರ್ಮಿಸಿಕೊಂಡವರೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡರೆ ಒಂದು ವರ್ಷದಲ್ಲಿಯೇ ಅಂತರ್ಜಲ ಮಟ್ಟ ಹೆಚ್ಚಾಗಿ ಭಾರಿ ಬದಲಾವಣೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ರಾಹುಲ್​ ಪಾಂಡ್ವೆ ಹೇಳಿದ್ದಾರೆ.

ABOUT THE AUTHOR

...view details