ಕಲಬುರಗಿ: ಕೋಡಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ ಹಿನ್ನೆಲೆ ಗ್ರಾಮ ಲೆಕ್ಕಾಧಿಕಾರಿ ಶ್ರೀಮಂತ ರನ್ನ ಅವರನ್ನು ಅಮಾನತುಗೊಳಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಆದೇಶ ನೀಡಿದ್ದಾರೆ.
ಕೋಡಿ ಗ್ರಾಮ ಲೆಕ್ಕಾಧಿಕಾರಿ ಅಮಾನತ್ಗೆ ಸಚಿವ ಆರ್. ಅಶೋಕ್ ಆದೇಶ - r ashok latest news
ಜೇವರ್ಗಿಯ ಹಲವು ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಆದ್ರೆ ಕೋಡಿ ಗ್ರಾಮ ಲೆಕ್ಕಾಧಿಕಾರಿ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಕೋಡಿ ಗ್ರಾಮಸ್ಥರು ಆರ್. ಅಶೋಕ್ ಎದುರು ಅಳಲು ತೋಡಿಕೊಂಡ್ರು. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿ ಅಮಾನತಿಗೆ ಸಚಿವರು ಆದೇಶ ಹೊರಡಿಸಿದರು.
ಕೋಡಿ ಗ್ರಾಮ ಲೆಕ್ಕಾಧಿಕಾರಿ ಅಮಾನತ್ಗೆ ಸಚಿವ ಆರ್. ಅಶೋಕ್ ಆದೇಶ
ಸಚಿವ ಆರ್. ಅಶೋಕ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಜೇವರ್ಗಿ ತಾಲೂಕಿನ ಸರಡಗಿ ಸೇತುವೆ ವೀಕ್ಷಣೆ ವೇಳೆ, ಜೇವರ್ಗಿಯ ಹಲವು ಗ್ರಾಮಗಳು ಪ್ರವಾಹದಿಂದ ತತ್ತರಿಸಿ ಹೋಗಿರುವುದು ಗಮನಕ್ಕೆ ಬಂದಿದೆ. ಆದ್ರೆ ಕೋಡಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಕೋಡಿ ಗ್ರಾಮಸ್ಥರು ಆರ್. ಅಶೋಕ್ ಎದುರು ಅಳಲು ತೋಡಿಕೊಂಡ್ರು.
ಈ ವೇಳೆ ಸ್ಥಳದಲ್ಲೇ ಸಚಿವರು ತಕ್ಷಣ ಕೋಡಿ ಗ್ರಾಮದ ಶ್ರೀಮಂತ ರನ್ನ ಅಮಾನತು ಮಾಡುವಂತೆ ಜೇವರ್ಗಿ ತಹಶೀಲ್ದಾರ್ಗೆ ಆದೇಶಿಸಿದ್ದಾರೆ.