ಸೇಡಂ:ರಾಜಕೀಯ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.
ಸೇಡಂ: ಕ್ಷುಲ್ಲಕ ಕಾರಣಕ್ಕೆ ಜಗಳ... ಓರ್ವನಿಗೆ ಚಾಕು ಇರಿತ - ಸೇಡಂ ಓರ್ವನಿಗೆ ಚಾಕು ಇರಿತ
ಗ್ರಾಮದ ಚಹಾ ಅಂಗಡಿ ಬಳಿ ರಾಜಕೀಯ ಚರ್ಚೆಯ ವೇಳೆ ಶೇಖರ ಗುರುಲಿಂಗಪ್ಪ ಕೋಡ್ಲಾ ಎಂಬಾತನ ಕುತ್ತಿಗೆಗೆ ವೆಂಕಟರೆಡ್ಡಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಸೇಡಂ: ಕ್ಷುಲ್ಲಕ ಕಾರಣಕ್ಕೆ ಜಗಳ... ಓರ್ವನಿಗೆ ಚಾಕು ಇರಿತ ಚಾಕು ಇರಿತ](https://etvbharatimages.akamaized.net/etvbharat/prod-images/768-512-10064048-thumbnail-3x2-fhjh.jpg)
ಚಾಕು ಇರಿತ
ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ವ್ಯಕ್ತಿಗೆ ಚಾಕು ಇರಿತ
ಗ್ರಾಮದ ಚಹಾ ಅಂಗಡಿ ಬಳಿ ರಾಜಕೀಯ ಚರ್ಚೆಯ ವೇಳೆ ಶೇಖರ ಗುರುಲಿಂಗಪ್ಪ ಕೋಡ್ಲಾ ಎಂಬುವರ ಕುತ್ತಿಗೆಗೆ ವೆಂಕಟರೆಡ್ಡಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಕೂಡಲೇ ದಾಳಿಗೊಳಗಾದವನನ್ನು ಸೇಡಂನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಿಪಿಐ ರಾಜಶೇಖರ ಹಳಗೋದಿ ತಿಳಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.