ಸೇಡಂ: ಸೇಡಂ ತಾಲೂಕಿನೆಲ್ಲೆಡೆ 10 ಕಡೆಗಳಲ್ಲಿ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ರೀತಿಯ ಸೋಂಕಿತರನ್ನು ಸೇಡಂ ವ್ಯಾಪ್ತಿಯಲ್ಲಿ ಇರಿಸಿಕೊಳ್ಳುವುದಿಲ್ಲ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸ್ಪಷ್ಟಪಡಿಸಿದ್ದಾರೆ.
ಹೊರ ರಾಜ್ಯ, ಹೊರ ದೇಶಗಳಿಂದ ಸೇಡಂಗೆ ಬಂದವರಿಗೆ 10 ಕಡೆ ಕ್ವಾರಂಟೈನ್ ವ್ಯವಸ್ಥೆ: ಶಾಸಕ ತೇಲ್ಕೂರ - come to Sedam
ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಮನೆಯಲ್ಲಿದ್ದುಕೊಂಡೇ ಆಚರಿಸಬೇಕು. ಈ ಮೂಲಕ ಕೊರೊನಾವನ್ನು ದೇಶದಿಂದ ತೊಲಗಿಸುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ಸೇಡಂ ಶಾಸಕ ತೇಲ್ಕೂರ ಮನವಿ ಮಾಡಿದ್ದಾರೆ.

ಪಟ್ಟಣದ ಕೆಲವೆಡೆ ಗುರುತಿಸಿರುವ ಕ್ವಾರಂಟೈನ್ ಕಟ್ಟಡಗಳ ಸಮೀಪದ ಜನ ತಪ್ಪು ಕಲ್ಪನೆಗಳಿಂದ ಭಯಭೀತರಾಗಿದೆ. ಹಾಗಾಗಿ ಬೇರೆ ರಾಜ್ಯಗಳಿಂದ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡುವ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಕಟ್ಟಡಗಳನ್ನು ಗುರುತಿಸಲಾಗಿದೆ. ಇದಕ್ಕೆ ಜನ ಭಯಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಸರ್ಕಾರಿ ವಸತಿ ನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 1300 ಜನ ಬೇರೆ ರಾಜ್ಯಗಳಿಂದ ಸೇಡಂಗೆ ಬಂದಿದ್ದಾರೆ. ಅವರಿಗೆ ಊಟ, ದವಸ ಧಾನ್ಯಗಳನ್ನು ನೀಡಲಾಗಿದೆ. ಅಲ್ಲದೆ ಸ್ಥಳೀಯವಾಗಿ ಮಾಸ್ಕ್ ಇಲ್ಲದೆ ತಿರುಗಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ಸರ್ಕಾರ ಸೂಚಿಸಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಅನುಮತಿ ಇಲ್ಲದ ದ್ವಿಚಕ್ರ ವಾಹನ ಸಂಚಾರ ಸ್ಥಗಿತಗೊಳಸಲಾಗುವುದು ಎಂದು ಶಾಸಕ ಹೇಳಿದ್ರು.