ಕರ್ನಾಟಕ

karnataka

ETV Bharat / state

ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು... ಇದು ಈಟಿವಿ ಇಂಪ್ಯಾಕ್ಟ್​ - ಈಟಿವಿ ಇಂಪ್ಯಾಕ್ಟ್​

ಕೊರೊನಾ, ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಆಟೋ ಚಾಲಕ ತನ್ನ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುತ್ತಿದ್ದರು. ಈ ಕುರಿತಂತೆ ಈಟಿವಿ ಭಾರತ ಚಾಲಕನ ಸಹಾಯಕ್ಕಾಗಿ ಕೇಳಿದ್ದ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಚಾಲಕನ ಕುಟುಂಬಕ್ಕೆ ಪರಿಹಾರದ ಮಹಾಪೂರ ಹರಿದು ಬಂದಿದೆ.

Public helps to auto driver at Kalaburagi
ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು

By

Published : Apr 26, 2020, 7:59 PM IST

Updated : Apr 26, 2020, 8:49 PM IST

ಸೇಡಂ(ಕಲಬುರಗಿ):ಕೊರೊನಾ, ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಆಟೋ ಚಾಲಕ ತನ್ನ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುತ್ತಿದ್ದರು. ಈ ಕುರಿತಂತೆ ಈಟಿವಿ ಭಾರತದಲ್ಲಿ ಬಿತ್ತರಿಸಿದ್ದ ವಿಸ್ತೃತ ವರದಿ ಚಾಲಕನ ಕುಟುಂಬಕ್ಕೆ ಪರಿಹಾರದ ಮಹಾಪೂರವೇ ಹರಿದು ಬಂದಿದೆ.

ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು

ಮೂಲತಃ ಸೇಡಂ ನಿವಾಸಿಯಾಗಿರುವ ಬೆಂಗಳೂರಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ರವಿಕುಮಾರ್,​ ಆಟೋ ಓಡಿಸಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಕೊರೊನಾದಿಂದ ಆಟೋ ಸೇವೆ ಕೂಡಾ ಸ್ಥಗಿತಗೊಂಡಿದ್ದು, ಜೀವನ ನಡೆಸುವುದು ದುಸ್ತರವಾಗಿ ಸಹಾಯಕ್ಕಾಗಿ ಅಂಗಲಾಚಿದ್ದರು.

ಈ ಕುರಿತಂತೆ ಈಟಿವಿ ಭಾರತನಲ್ಲಿ 'ಲಾಕ್​ಡೌನ್​ಗೆ ದಿಕ್ಕು ತೋಚದಾದ ಕುಟುಂಬ... ಸಹಾಯಕ್ಕಾಗಿ ಅಂಗಲಾಚಿದ ಆಟೋ ಚಾಲಕ' ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿತ್ತು. ಇದನ್ನು ಓದಿದ ಸೇಡಂ ನಿವಾಸಿ ಪ್ರಶಾಂತ್​​ ಕೇರಿ, ಅಬ್ದುಲ್​ ಸತ್ತಾರ ಆರ್ಥಿಕ ನೆರವು ನೀಡಿದ್ದಾರೆ. ಅಷ್ಟೇ ಅಲ್ಲದೆ ವರದಸ್ವಾಮಿ ಹಿರೇಮಠ ಎಂಬುವರು ಬೆಂಗಳೂರಿನ ಯಶವಂತಪುರ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ ಧವಸ ಧಾನ್ಯ ಹಾಗೂ ಅಡುಗೆ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.

ಲಾಕ್​ಡೌನ್​ಗೆ ದಿಕ್ಕು ತೋಚದಾದ ಕುಟುಂಬ... ಸಹಾಯಕ್ಕಾಗಿ ಅಂಗಲಾಚಿದ ಆಟೋ ಚಾಲಕ

ತಮ್ಮ ಕುಟುಂಬದ ನೆರವಿಗೆ ಸ್ಪಂದಿಸಿದ ಜನರಿಗೆ ಮತ್ತು ವರದಿ ಪ್ರಕಟಿಸಿದ್ದ ಈಟಿವಿ ಭಾರತಕ್ಕೆ ಚಾಲಕ ರವಿಕುಮಾರ್​ ಧನ್ಯವಾದ ಅರ್ಪಿಸಿದ್ದಾರೆ.​ ಆಟೋ ಚಾಲಕನ ಕಷ್ಟಕ್ಕೆ ಸ್ಪಂದಿಸಿದ ಓದುಗರಿಗೆ ಈಟಿವಿ ಭಾರತನಿಂದ ಧನ್ಯವಾದ ತಿಳಿಸುತ್ತೇನೆ.

Last Updated : Apr 26, 2020, 8:49 PM IST

ABOUT THE AUTHOR

...view details