ಕಲಬುರಗಿ:ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಕಿಂಗ್‌ಪಿನ್ ಆರ್ ಡಿ ಪಾಟೀಲ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾಮೀನು ನೀಡುವ ವೇಳೆ ಹೈಕೋರ್ಟ್ ಹಾಕಿದ ಷರತ್ತುಗಳನ್ನು ಆರ್‌ಡಿ ಪಾಟೀಲ್ ಉಲ್ಲಂಘಿಸಿದ್ದು, ಸಿಐಡಿ ಅಧಿಕಾರಿಗಳು ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಹೈಕೋರ್ಟ್ ಷರತ್ತು ಉಲ್ಲಂಘಿಸಿದ ಆರೋಪ:ಆರ್ ಡಿ ಪಾಟೀಲ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ವಿಧಿಸಿ, ಬಿಡುಗಡೆಗೊಳಿಸಿತ್ತು. ಷರತ್ತಿನ ಅನ್ವಯ ಜಿಲ್ಲೆಯ ಟ್ರಯಲ್ ಕೋರ್ಟ್(ಜಿಲ್ಲಾ ಕೆಂದ್ರ) ಬಿಟ್ಟು ಹೊರ ಹೋಗಬಾರದು. ಜಾಮೀನಿನಲ್ಲಿ ಸೂಚಿರುವ ವಿಳಾಸದಲ್ಲೇ ಇರಬೇಕು.
ತನಿಖಾಧಿಕಾರಿಗಳಿಗೆ ನೀಡಿರುವ ಮೊಬೈಲ್ ಸಂಖ್ಯೆ ಬದಲಿಸದೆ ಸದಾ ಲಭ್ಯವಿರಬೇಕು. ಮೊಬೈಲ್ ನಂಬರ್ ಬದಲು ಮಾಡಿದ್ರೆ ಅಥವಾ ಅಡ್ರೆಸ್ ಬದಲಾವಣೆ ಮಾಡುವುದಾದ್ರೆ ತನಿಖಾಧಿಕಾರಿ ಮತ್ತು ಕೋರ್ಟ್ ಗಮನಕ್ಕೆ ತರಬೇಕು. ಜಾಮೀನಿನ ಮೇಲೆ ಹೊರ ಬಂದಾಗ ಸಾಕ್ಷಿಗಳನ್ನು ನಾಶ ಮಾಡಬಾರದು. ಹೀಗೆ ಅನೇಕ ಷರತ್ತುಗಳನ್ನು ಹೈಕೊರ್ಟ್ ವಿಧಿಸಿದೆ.