ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದ ಚಾರ್ಜ್ಶೀಟ್ನ್ನು ಸಿಐಡಿ ಕೋರ್ಟ್ಗೆ ಸಲ್ಲಿಸಿದೆ. ಸಿಐಡಿ ತಂಡ ಸುದೀರ್ಘ ತನಿಖೆ ಕೈಗೊಂಡು ಸುಮಾರು 2 ಸಾವಿರ ಪುಟಗಳುಳ್ಳ ಚಾರ್ಜ್‌ಸೀಟ್ ತಯಾರಿಸಿದೆ. ಇದನ್ನು ಇಂದು ಸಿಐಡಿ ಅಧಿಕಾರಿಗಳು ಕಲಬುರಗಿಯ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಜ್ಯಾನಜ್ಯೋತಿ ಶಾಲೆಗೆ ಸಂಬಂಧಿಸಿದ ಚಾರ್ಜ್ಶೀಟ್ ಕೋರ್ಟ್ಗೆ ಸಲ್ಲಿಕೆ - ಪಿಎಸ್‌ಐ ನೇಮಕಾತಿ ಹಗರಣ
ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣ-ದಿವ್ಯಾ ಹಾಗರಗಿ ಒಡೆತನದ ಶಾಲೆಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಕೋರ್ಟ್ಗೆ ಸಲ್ಲಿಕೆ-ಸಿಐಡಿಯಿಂದ ಆರೋಪ ಪಟ್ಟಿ ಸಲ್ಲಿಕೆ
ಕೋರ್ಟ್ಗೆ ಜ್ಯಾನಜ್ಯೋತಿ ಶಾಲೆಯ ಸಂಬಂಧಿಸಿದ ಚಾರ್ಜ್ಶೀಟ್ ಸಲ್ಲಿಕೆ
ಓದಿ:ಕಾನೂನಿನ ಮುಂದೆ ಯಾರು ದೊಡ್ಡವರಲ್ಲ: ಎಡಿಜಿಪಿ ಬಂಧನ ಬೆನ್ನಲೇ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್
ಪಿಎಸ್ಐ ಪರೀಕ್ಷೆ ಅಕ್ರಮ ಸಂಬಂಧ ಈಗಾಗಲೇ ಅಕ್ರಮದ ಕೇಂದ್ರಸ್ಥಾನ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಆಕೆಯ ಪತಿ ರಾಜೇಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೇರಿ ಒಟ್ಟು 34 ಜನರನ್ನು ಸಿಐಡಿ ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಬಂಧಿತ ಆರೋಪಿಗಳನ್ನ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಸಿಐಡಿ ತಂಡ ಆರೋಪಿಗಳ ವಿರುದ್ಧ ಸಿದ್ಧಪಡಿಸಿದ ಚಾರ್ಜ್‌ಸೀಟ್ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.