ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸಿಐಡಿ ಅಧಿಕಾರಿಗಳು ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳನ್ನು ಬಂಧಿಸಿದ್ದಾರೆೆ.
ಪಿಎಸ್ಐ ನೇಮಕಾತಿ ಅಕ್ರಮ: ಕಲಬುರಗಿಯಲ್ಲಿ ಮತ್ತೆ 8 ಅಭ್ಯರ್ಥಿಗಳ ಬಂಧನ - ಈಟಿವಿ ಭಾರತ ಕನ್ನಡ
ಆರೋಪಿಗಳಾದ ಈ ಎಂಟು ಜನ ಕಲಬುರಗಿ ನಗರದ ಎಸ್ಬಿಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದರು.
ಅಫಜಲಪುರ ತಾಲೂಕಿನ ರವಿರಾಜ್ ಅಖಂಡೆ, ಸಿದ್ದಣಗೌಡ ಪಾಟೀಲ್, ಕಲ್ಲಪ್ಪ ಅಲ್ಲಾಪುರ, ಜೇವರ್ಗಿ ತಾಲೂಕಿನ ಶ್ರೀಶೈಲ್, ಪೀರಪ್ಪಾ ಸಿದ್ನಾಳ, ಸೋಮನಾಥ, ವಿಜಯಕುಮಾರ್ ನೆಲೋಗಿ ಹಾಗು ಭಗವಂತರಾಯ ಯಾತನೂರ್ ಬಂಧಿತರು. ಇವರು ಕಲಬುರಗಿ ನಗರದ ಎಸ್ಬಿಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದು ಕಲ್ಯಾಣ ಕರ್ನಾಟಕ ಕೋಟಾದಡಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಬಂಧಿತರಲ್ಲಿ ಸಿದ್ದಣಗೌಡ ಪಾಟೀಲ್ ಎಂಬಾತ ಆರ್.ಡಿ.ಪಾಟೀಲ್ ಹೆಂಡತಿಯ ತಮ್ಮ(ಅಳಿಯ) ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜುಬೈರ್ಗೆ ಸಮನ್ಸ್ ಜಾರಿ