ಕಲಬುರಗಿ: ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿ ಬಂಧಿತ ಐವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಇದೀಗ ಆರೋಪಿಗಳಿಗೆ ಜೈಲೇ ಗತಿ ಎಂಬಂತಾಗಿದೆ.
ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣ ತನಿಖೆಯ ಹಂತದಲ್ಲಿದ್ದು, ನ್ಯಾಯಲಯವು ಬಂಧಿತರಲ್ಲಿ ಈವರೆಗೂ ಒಬ್ಬರಿಗೂ ಸಹ ಜಾಮೀನು ಮಂಜೂರು ಮಾಡಿಲ್ಲ.
ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ
ಕಲಬುರಗಿ 3ನೇ ಜೆಎಮ್‌ಎಫ್‌ಸಿ ಕೋರ್ಟ್‌ನಿಂದ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಆರೋಪಿಗಳಾದ A -17 ಜ್ಯೋತಿ ಪಾಟೀಲ್, A19 ಅರ್ಚನಾ, A-20 ಸುನಂದಾ, A-25 ಶ್ರೀಧರ್ ಪವಾರ್, A-28 ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿದಂತೆ ಐದು ಜನರ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣ ತನಿಖೆಯ ಹಂತದಲ್ಲಿದ್ದು, ನ್ಯಾಯಲಯವು ಬಂಧಿತರಲ್ಲಿ ಈವರೆಗೂ ಒಬ್ಬರಿಗೂ ಸಹ ಜಾಮೀನು ಮಂಜೂರು ಮಾಡಿಲ್ಲ.
ಹನುಮಾನ್ ಪ್ರತಿಮೆ ಸ್ಥಾಪನೆ ವಿಚಾರವಾಗಿ ಗುಂಪು ಘರ್ಷಣೆ: ನಿಷೇಧಾಜ್ಞೆ ಜಾರಿ