ಕರ್ನಾಟಕ

karnataka

ETV Bharat / state

ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಮಂಜುನಾಥ್, ಶ್ರೀಧರ್​​ ಮೂರು ದಿನ ಸಿಐಡಿ ವಶಕ್ಕೆ - ಪಿಎಸ್ಐ ಪರೀಕ್ಷೆ ಕಿಂಗ್‌ಪಿನ್ ಮಂಜುನಾಥ್

ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಮಂಜುನಾಥ್ ಮೇಳಕುಂದಿ ಹಾಗೂ ಶ್ರೀಧರ್ ಪವಾರ್ ಅವರನ್ನು ಮೂರು ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ.

psi-exam-scam-accused-manjunath-sridhar-given-to-cid-custody
ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಮಂಜುನಾಥ್, ಶ್ರೀಧರ್​​ ಮೂರು ದಿನ ಸಿಐಡಿ ವಶಕ್ಕೆ

By

Published : May 2, 2022, 7:00 PM IST

ಕಲಬುರಗಿ:ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಮಂಜುನಾಥ್ ಮೇಳಕುಂದಿ ಹಾಗೂ ಶ್ರೀಧರ್ ಪವಾರ್ ಅವರನ್ನು ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ‌ ಆದೇಶ ಮಾಡಿದೆ.

ಪ್ರಕರಣದಲ್ಲಿ ಸಿಐಡಿಯಿಂದ ತಲೆಮರೆಸಿಕೊಂಡಿದ್ದ ಕಿಂಗ್‌ಪಿನ್ ಮಂಜುನಾಥ 21 ದಿನಗಳ ಬಳಿಕ ಸ್ವಯಂ‌ ಪ್ರೇರಿತನಾಗಿ ಸಿಐಡಿ ಮುಂದೆ ಹಾಜರಾಗಿದ್ದಾನೆ. ಇನ್ನೋರ್ವ ಆರೋಪಿ ಶ್ರೀಧರ ಪವಾರ್​​‌ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಇಬ್ಬರು ಆರೋಪಿಗಳನ್ನೂ ಇಂದು ವೈದ್ಯಕೀಯ ತಪಾಸಣೆ ಬಳಿಕ ಮೂರನೇ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಅಧಿಕಾರಿಗಳ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಇಬ್ಬರನ್ನು ಮೂರು ದಿನ ಸಿಐಡಿ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷಾ ಹಗರಣದ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details