ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಮರೆತು ಪಿಎಸ್​ಐ ಬರ್ತ್​ಡೇ ಆಚರಣೆ: ನೆಟ್ಟಿಗರಿಂದ ವ್ಯಾಪಕ ಟೀಕೆ - ಕಲಬುರಗಿ

ನೆಲೋಗಿ ಪೊಲೀಸ್ ಠಾಣೆ ಪಿಎಸ್ಐ ಮಲ್ಲಣ್ಣ ಯಲಗೋಡ ಅವರು ಜೂನ್ 13 ರಂದು ಸಾಯಂಕಾಲ ಬರ್ತಡೇ ಆಚರಿಸಿಕೊಂಡಿದ್ದು, ನೂರಾರು ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ ಪಿಎಸ್ಐ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

PSI birthday celebration
ಪಿಎಸ್​ಐ ಬರ್ತ್​ಡೇ ಆಚರಣೆ

By

Published : Jun 16, 2020, 12:47 PM IST

ಕಲಬುರಗಿ: ಸಾಮಾಜಿಕ ಅಂತರ ಮರೆತು ಬೇಜವಾಬ್ದಾರಿಯಿಂದ ಪಿಎಸ್ಐಯೊಬ್ಬರು ಬರ್ತ್​ಡೇ ಆಚರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಮಾಜಿಕ ಅಂತರ ಮರೆತು ಬರ್ತ್​ಡೇ ಆಚರಿಸಿಕೊಂಡ ಪಿಎಸ್​ಐ

ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ಪಿಎಸ್ಐ ಮಲ್ಲಣ್ಣ ಯಲಗೋಡ ಅವರು ಜೂನ್ 13 ರಂದು ಸಾಯಂಕಾಲ ಬರ್ತಡೇ ಆಚರಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನೆಲೋಗಿ ಠಾಣೆ ವ್ಯಾಪ್ತಿಯ ಹಲವೆಡೆ ಆಚರಿಸಿದ್ದಾರೆ.

ಕಲ್ಲೂರು ಬಿ ಗ್ರಾಮದಲ್ಲಿ ನೂರಾರು ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ ಪಿಎಸ್ಐ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬೇಜವಾಬ್ದಾರಿತನ ಪ್ರದರ್ಶನ ಮಾಡಲಾಗಿದೆ. ಕ್ಷೀರಾಭಿಷೇಕದ ಸಂಭ್ರಮವನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ವ್ಯಾಪಕವಾಗಿ ಟೀಕಿಸಿದ್ದಾರೆ.

ಇನ್ನು ಪ್ರಕರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಅವರ ಗಮನಕ್ಕೆ ಬರುತ್ತಿದ್ದಂತೆ ಪಿಎಸ್ಐ ಮಲ್ಲಣ್ಣ ಅವರ ವಿರುದ್ದ ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details