ಕಲಬುರಗಿ: ಗಣೇಶ ವಿಸರ್ಜನೆ ಮೇರವಣಿಗೆ ವೇಳೆ ಮೆಹಬಾಸ್ ಮಸೀದಿ ಬಳಿ ಪ್ರಚೋದನಾಕಾರಿ ಹಾಡು ಹಾಕಿ ನೃತ್ಯ ಮಾಡಿದ ಆರೋಪದ ಹಿನ್ನೆಲೆ ಗಣೇಶ ಮಂಡಳಿಯ ನಾಲ್ವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 10ರ ರಾತ್ರಿ ಬೋವಿ ಸಮಾಜದ ಗಣೇಶ ವಿಸರ್ಜನೆ ವೇಳೆ ನಗರದ ಸೂಪರ್ ಮಾರ್ಕೇಟ್ ಮೆಹಬಾಸ್ ಮಸೀದಿ ಬಳಿ 'ತುಮಾರಿ ಔಕಾತ್ ಬತಾದೇಂಗೆ' ಅನ್ನೋ ಹಾಡು ಹಾಕಿ ಯುವಕರು ನೃತ್ಯ ಮಾಡಿದ್ದರು. ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪೊಲೀಸರು ಬೋವಿ ಸಮಾಜ ಗಣೇಶೋತ್ಸವ ಮಂಡಳಿ ಅಧ್ಯಕ್ಷ ತುಕಾರಾಂ ಸೇರಿ ನಾಲ್ವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.