ಕಲಬುರಗಿ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನ ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ಎನ್ಈಕೆಎಸ್ಆರ್ಟಿಸಿ ನೌಕರರು ಕಾಲ್ನಡಿಗೆ ಜಾಥಾ ನಡೆಸಿದರು.
ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ NEKSRTC ಸಿಬ್ಬಂದಿಯಿಂದ ಕಾಲ್ನಡಿಗೆ ಜಾಥಾ.. - ಕಲಬುರಗಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ
ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸೇವೆ ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಹಾಗೂ ಸಾರಿಗೆ ಸಂಸ್ಥೆಯ ಚಾಲಕ,ನಿರ್ವಾಹ ಹಾಗೂ ಮೆಕ್ಯಾನಿಕ್‌ಗಳ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದರು. ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.
ಸಾರಿಗೆ ನೌಕರರ ಪ್ರತಿಭಟನೆ
ಎನ್ಈಕೆಎಸ್ಆರ್ಟಿಸಿ ನೌಕರರ ಸಂಘ ಹಾಗೂ ಶ್ರಮ ಜೀವಿಗಳ ವೇದಿಕೆ ಸಂಘಟನೆ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾನಿರತರು ಕಾಲ್ನಡಿಗೆ ಜಾಥಾ ನಡೆಸಿದರು.