ಕರ್ನಾಟಕ

karnataka

ETV Bharat / state

ಹರ್ಷ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದು ಕಾರ್ಯಕರ್ತರ ಬೃಹತ್ ಕೇಸರಿ ಧ್ವಜ ಮೆರವಣಿಗೆ - kalburgi hindus protest

ಪ್ರತಿಭಟನೆಯಲ್ಲಿ ವಿವಿಧ ಸ್ವಾಮೀಜಿಗಳು, ವಿಹೆಚ್‌ಪಿ ಮುಖಂಡರು ಮಾತನಾಡಿ, ಹರ್ಷ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.‌ ಜಿಹಾದ್ ಹೆಸರಿನಲ್ಲಿ ಹಿಂದು ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು..

protest of bhajarangdala about  harsha murder
ಕಾರ್ಯಕರ್ತರ ಬೃಹತ್ ಕೇಸರಿ ಧ್ವಜ ಮೆರವಣಿಗೆ

By

Published : Feb 23, 2022, 3:52 PM IST

ಕಲಬುರಗಿ/ವಿಜಯಪುರ :ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಖಂಡಿಸಿ 200 ಮೀಟರ್ ಉದ್ದದ ಕೇಸರಿ ಧ್ವಜದೊಂದಿಗೆ ಬೃಹತ್ ಪ್ರತಿಭಟನೆಯು ಕಲಬುರಗಿ ನಗರದಲ್ಲಿ ನಡೆಯಿತು.

ವಿಶ್ವ ಹಿಂದು ಪರಿಷತ್, ಬಜರಂಗದಳದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಚೌಕ್ ವೃತ್ತದಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ PFI, SDPI ಹಾಗೂ CFI ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಲಾಯಿತು‌.

ಯಾವುದೇ ಒತ್ತಡಕ್ಕೆ ಮಣಿಯದೆ ಹಂತಕರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು . ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಭಾಗಿಯಾಗಿದ್ದು, ಜಗತ್ ವೃತ್ತದಲ್ಲಿ ಹಿಂದು‌ ಕಾರ್ಯಕರ್ತರು ಹರ್ಷಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹರ್ಷ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದು ಕಾರ್ಯಕರ್ತರ ಬೃಹತ್ ಕೇಸರಿ ಧ್ವಜ ಮೆರವಣಿಗೆ..

ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ವಿಜಯಪುರ ಜಿಲ್ಲಾ ಘಟಕ ಹಾಗೂ ಭಾವಸಾರ ಕ್ಷತ್ರಿಯ ಸಂಘಟನೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು ಗಾಂಧಿವೃತ್ತದಲ್ಲಿ ಸಂಪನ್ನಗೊಂಡಿತು.

ಪ್ರತಿಭಟನೆಯಲ್ಲಿ ವಿವಿಧ ಸ್ವಾಮೀಜಿಗಳು, ವಿಹೆಚ್‌ಪಿ ಮುಖಂಡರು ಮಾತನಾಡಿ, ಹರ್ಷ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.‌ ಜಿಹಾದ್ ಹೆಸರಿನಲ್ಲಿ ಹಿಂದು ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದುಗಳ ಪಕ್ಷವೇ ಅಧಿಕಾರದಲ್ಲಿದ್ದು, ಇಂತಹ ಹತ್ಯೆಯನ್ನು ತಡೆಯಬೇಕು. ಹಾಗೂ ಹರ್ಷನ ಕೊಲೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ನಂತರ ಗಾಂಧಿವೃತ್ತದಿಂದ ಮತ್ತೆ ಮೆರವಣಿಗೆ ಆರಂಭಿಸಿ ಅಂಬೇಡ್ಕರ್ ಸರ್ಕಲ್ ಬಳಿಗೆ ಮೆರವಣಿಗೆ ಸಾಗಿತು. ನಂತರ ಮಾತನಾಡಿದ ಮುಖಂಡರು, ಹರ್ಷ ಹತ್ಯೆಯನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌ ಅವರ ಮೂಲಕ ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಎಸ್. ಪಾಟೀಲ ಕೂಚಬಾಳ, ಬಿಜೆಪಿ ಮುಖಂಡ ಚಂದ್ರಶೇಖರ್ ಸೇರಿದಂತೆ ನೂರಾರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಓದಿ :2019ರಲ್ಲಿ ಲುಕ್​​ನಿಂದಲೇ ಪ್ರಸಿದ್ಧಿಯಾದ ರೀನಾ ದ್ವಿವೇದಿ ಈ ಬಾರಿಯೂ ಚುನಾವಣಾಧಿಕಾರಿಯಾಗಿ ಬಂದ್ರು!

ABOUT THE AUTHOR

...view details