ಕರ್ನಾಟಕ

karnataka

ETV Bharat / state

ಮಕ್ಕಳು, ಗರ್ಭಿಣಿ - ಬಾಣಂತಿಯರಿಗೆ ಮೊಟ್ಟೆ ನೀಡದೇ ಅನ್ಯಾಯ: ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ - ಬಾಣಂತಿಯರಿಗೆ ಮೊಟ್ಟೆ ನೀಡದೆ ಅನ್ಯಾಯ

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡದೇ ಕಳಪೆ ಗುಣಮುಟ್ಟದ ಆಹಾರ ನೀಡಲಾಗುತ್ತಿದೆ. ಜೊತೆಗೆ ಮೊಟ್ಟೆ ಹಾಗೂ ಪೌಷ್ಠಿಕ ಆಹಾರ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಕಲಬುರಗಿಯ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Protest in front of CDPO office, ಕಲಬುರಗಿಯಲ್ಲಿ ಸಿಡಿಪಿಒ ಕಛೇರಿ ಎದುರು ಪ್ರತಿಭಟನೆ
ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊಟ್ಟೆ ನೀಡದೆ ಅನ್ಯಾಯ: ಸಿಡಿಪಿಒ ಕಛೇರಿ ಎದುರು ಪ್ರತಿಭಟನೆ

By

Published : May 30, 2020, 5:57 PM IST

ಕಲಬುರಗಿ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮೊಟ್ಟೆ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಕಲಬುರಗಿಯ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ಹಾಗೂ ಪೌಷ್ಠಿಕ ಆಹಾರ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದಂತೆ ಪೌಷ್ಠಿಕ ಆಹಾರ ನೀಡುತ್ತಿಲ್ಲ. ಆದರೆ, ಮೊಟ್ಟೆ ನೀಡಿರೋದಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಪತ್ರ ಬರೆಸಿಕೊಳ್ಳಲಾಗಿದೆ. ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಲಾಗತ್ತಿದೆ. ಪೌಷ್ಠಿಕ ಆಹಾರ ನೀಡದೇ ಕಳಪೆ ಗುಣಮುಟ್ಟದ ಆಹಾರ ನೀಡುವ ಕುರಿತು ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ABOUT THE AUTHOR

...view details