ಕಲಬುರಗಿ:ಬೇಡ ಜಂಗಮ ಹೆಸರಲ್ಲಿ ಎಸ್.ಸಿ.ಗಳಿಗೆ ನೀಡಿರೋ ಮೀಸಲಾತಿಯನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು.
ಎಸ್.ಸಿ. ಸಮುದಾಯದ ಮೀಸಲಾತಿ ಕಬಳಿಕೆ ಆರೋಪ: ದಲಿತ ಸಂಘಟನೆಗಳ ಪ್ರತಿಭಟನೆ - utilization of Reservation of SCs in kalburgi
ಬೇಡ ಜಂಗಮ ಹೆಸರಲ್ಲಿ ಎಸ್.ಸಿ.ಗಳಿಗೆ ನೀಡಿರೋ ಮೀಸಲಾತಿಯನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು.
![ಎಸ್.ಸಿ. ಸಮುದಾಯದ ಮೀಸಲಾತಿ ಕಬಳಿಕೆ ಆರೋಪ: ದಲಿತ ಸಂಘಟನೆಗಳ ಪ್ರತಿಭಟನೆ protest-by-dalit-organizations-in-kalburgi](https://etvbharatimages.akamaized.net/etvbharat/prod-images/768-512-5404148-thumbnail-3x2-sanju.jpg)
ಬೇಡ ಜಂಗಮ ಹೆಸರಲ್ಲಿ ಎಸ್.ಸಿ.ಗಳ ಮೀಸಲಾತಿ ಕಬಳಿಕೆ ವಿಚಾರ... ದಲಿತ ಸಂಘಟನೆಗಳಿಂದ ಪ್ರತಿಭಟನೆ...
ನಕಲಿ ಬೇಡ ಜಂಗಮ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಕಲಿ ಬೇಡ ಜಂಗಮ ಪ್ರಮಾಣಪತ್ರ ಸಲ್ಲಿಸಿ ಎಸ್.ಸಿ.ಗಳ ಮೀಸಲಾತಿ ಕಬಳಿಸಲಾಗುತ್ತಿದೆ. ಕೂಡಲೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್.ಸಿ.ಗಳ ಮೀಸಲಾತಿ ಕಬಳಿಕೆ ಆರೋಪ... ದಲಿತ ಸಂಘಟನೆಗಳಿಂದ ಪ್ರತಿಭಟನೆ
ಈ ಹಿಂದೆ ನಕಲಿ ಬೇಡ ಜಂಗಮ ಹೆಸರಲ್ಲಿ ನೌಕರಿ ಗಿಟ್ಟಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಕುರಿತು ಜನಪ್ರತಿನಿಧಿಗಳು ಧ್ವನಿ ಎತ್ತಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.