ಕಲಬುರಗಿ: ಶಂಕರಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಎಸ್ಡಿಪಿಐ ಬಾವುಟ ಹಾಕಿರುವುದನ್ನು ಖಂಡಿಸಿ ಬ್ರಾಹ್ಮಣ ಸಮುದಾಯದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಂಕರಾಚಾರ್ಯರ ಪ್ರತಿಮೆ ಬಳಿ ಎಸ್ಡಿಪಿಐ ಬಾವುಟ: ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ - Brahmin community
ಶಂಕರಾಚಾರ್ಯರ ಪ್ರತಿಮೆ ಬಳಿ ಎಸ್ಡಿಪಿಐ ಬಾವುಟ ಹಾಕಿರುವುದನ್ನು ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಾವುಟ ಹಾರಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಶಂಕರಾಚಾರ್ಯರ ಭಕ್ತರು, ಪ್ರತಿಮೆ ಬಳಿ ಬಾವುಟ ಹಾಕಿದ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೃಂಗೇರಿಯಲ್ಲಿರುವ ಶಂಕರಾಚಾರ್ಯ ಪ್ರತಿಮೆಯ ಬಳಿ ಅನ್ಯಧರ್ಮೀಯರು ಬಾವುಟ ಹಾರಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಮುಂದಾಗಿದ್ದಾರೆ. ಭಾವೈಕ್ಯತೆಗೆ ಧಕ್ಕೆ ತಂದಿರುವುದಲ್ಲದೆ ಶಂಕರಾಚಾರ್ಯರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಬಾವುಟ ಹಾರಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.