ಕರ್ನಾಟಕ

karnataka

ETV Bharat / state

ಗಣೇಶೋತ್ಸವ: ಪ್ರಮೋದ್ ಮುತಾಲಿಕ್‌ ಸೇರಿ ನಾಲ್ವರ ಭಾಷಣಕ್ಕೆ ಕಲಬುರಗಿ ಡಿಸಿ ನಿರ್ಬಂಧ - ಈಟಿವಿ ಭಾರತ್​ ಕನ್ನಡ

ಗಣೇಶ ಮೂರ್ತಿ ನಿಮಜ್ಜನದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ನಾಲ್ವರು ಸಾರ್ವಜನಿಕ‌ ಭಾಷಣ ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Kn_klb_03
ಮುತಾಲಿಕ್‌ ಸೇರಿ‌ ನಾಲ್ವರ ಭಾಷಣಕ್ಕೆ ನಿರ್ಬಂಧ

By

Published : Sep 20, 2022, 7:08 AM IST

Updated : Sep 20, 2022, 8:06 AM IST

ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ನಿಮಜ್ಜನ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ‌್ ಮುತಾಲಿಕ್ ಸೇರಿದಂತೆ ನಾಲ್ವರು ಸಾರ್ವಜನಿಕ‌ ಭಾಷಣ ಮಾಡದಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ನಿರ್ಬಂಧ ವಿಧಿಸಿದ್ದಾರೆ.

ಡಿಸಿ ಆದೇಶ

ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಮೋದ‌್ ಮುತಾಲಿಕ್, ಕುಂದಾಪುರನ ಕು.ಚೈತ್ರಾ ನಾಯಕ, ಕು.ಹಾರಿಕಾ ಮಂಜುನಾಥ ಹಾಗೂ ಕಾಳಿ ಶ್ರೀಸ್ವಾಮಿಗಳಿಗೆ ಸೆ.20ರ ಬೆಳಿಗ್ಗೆ 6 ಗಂಟೆಯಿಂದ ಸೆ.21ರ‌ ಮಧ್ಯರಾತ್ರಿ 12 ಗಂಟೆ ವರೆಗೆ ಸಾರ್ವಜನಿಕ‌ ಭಾಷಣ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ-1973ರ ಸೆಕ್ಷನ್ 133, 143 ಹಾಗೂ 144ರನ್ವಯ ನಿರ್ಬಂಧಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

ಜೇವರ್ಗಿಯ ಅಖಂಡೇಶ್ವರ ಎ.ಪಿ.ಎಂ.ಸಿ ಯಾರ್ಡ್ ಮತ್ತು ಗಣೇಶ ಚೌಕ್​ನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ನಿಮಜ್ಜನ ಇದೇ ಸೆ.21 ಬುಧವಾರ ನಡೆಯಲಿದೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮೋದ್ ಮುತಾಲಿಕ್​ಗೆ ದ.ಕ ಜಿಲ್ಲಾ ಪ್ರವೇಶ ನಿಷೇಧ

Last Updated : Sep 20, 2022, 8:06 AM IST

ABOUT THE AUTHOR

...view details