ಕಲಬುರಗಿ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ. ನಮ್ಮ ಅಭ್ಯರ್ಥಿಯನ್ನು ಕಡೆಗಣಿಸಿ ಜನ ತೀರ್ಮಾನ ನೀಡಿದ್ದಾರೆ. ಕಾರಣಗಳು ಹಲವಾರು ಇರಬಹುದು. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ನಮ್ಮನ್ನು ಜನ ಕಡೆಗಣಿಸಿದ್ದಕ್ಕೆ ಹಲವು ಕಾರಣಗಳಿರಬಹುದು:ಪ್ರಿಯಾಂಕ ಖರ್ಗೆ - ಪ್ರಿಯಾಂಕ್ ಖರ್ಗೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ. ನಮ್ಮ ಅಭ್ಯರ್ಥಿಯನ್ನು ಕಡೆಗಣಿಸಿ ಜನ ತೀರ್ಮಾನ ನೀಡಿದ್ದಾರೆ. ಕಾರಣಗಳು ಹಲವಾರು ಇರಬಹುದು. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಸಮ್ಮಿಶ್ರ ಸರ್ಕಾರದಿಂದಾಗಿ ಸೋಲನುಭವಿಸಿದ್ದೇವೆ ಎಂದು ಹೇಳಲಾಗೋದಿಲ್ಲ.ಇದರ ಬಗ್ಗೆ ನಾನು ಮಾತಾಡಲ್ಲ. ಆದರೆ ಈ ಫಲಿತಾಂಶ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರೋದು ಸಹಜ. ಒಳ್ಳೆಯ ಆಡಳಿತ ಕೊಡಲು ಯತ್ನಿಸಿದಾಗ ಬಿಜೆಪಿ ಅಪರೇಷನ್ ಕಮಲ ಮಾಡಲು ಯತ್ನಿಸಿದ್ದಾರೆ. ಅಪರೇಷನ್ ಕಮಲ ನಿಲ್ಲಲ್ಲ. ಸರ್ಕಾರ ಅಂದ ಮೇಲೆ ಸಹಜವಾಗಿ ಬೀಳುತ್ತೆ ಅಂತ ಬಿಂಬಿಸಲಾಗುತ್ತಿದೆ. ಆದರೆ ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕು.
ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ನನ್ನನ್ನೂ ಒಳಗೊಂಡಂತೆ ಸಂಬಂಧಿಸಿದ ನಾಯಕರು ಸೋಲಿನ ಹೊಣೆ ಹೊರುತ್ತೇವೆ ಎಂದು ಖರ್ಗೆ ತಿಳಿಸಿದ್ದಾರೆ.