ಕಲಬುರಗಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಉತ್ತರ ಪ್ರದೇಶ ಸರ್ಕಾರದ ವಿರುದ್ದ ಚಾಟಿ ಬೀಸಿದ್ದಾರೆ.
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಸಾವು ಹಿನ್ನಲೆ ಶಾಸಕ ಪ್ರಿಯಾಂಕ್ ಖರ್ಗೆ,ಸಿಎಂ ಯೋಗಿ ಆದಿತ್ಯನಾಥ್ ಒಬ್ಬ ಅಸಮರ್ಥ ಸಿಎಂ ಎಂದು ತಮ್ಮದೇ ಧಾಟಿಯಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನ ಕನ್ನಡ ಭಾವಾನುವಾದ
ಅವರು ಅತ್ಯಾಚಾರ ಮಾಡಿದ್ದರು, ಅವಳು ಹೋರಾಡಿದ್ದಳು
ಅವರು ಆಕೆಯ ಕುಟುಂಬಸ್ಥರನ್ನು ಕೊಂದಿದ್ದರು, ಅವಳು ಹೋರಾಡಿದ್ದಳು
ಅವರು ಹೆದರಿಸಿದ್ದರು,ಅವಳು ಹೋರಾಡಿದ್ದಳು
ಅವರು ಆಕೆಯನ್ನು ಜೀವಂತ ದಹಿಸಿದ್ದರು, ಆದರೂ ಅವಳು ಕೊನೆಯ ಉಸಿರಿರುವರೆಗೆ ಹೋರಾಡಿದ್ದಳು
ನ್ಯಾಯ ಸಿಗುವ ನಂಬಿಕೆಯಲ್ಲೇ ಅವಳು ಕೊನೆ ಉಸಿರೆಳೆದಳು
ದೇಶದಲ್ಲಿಯೇ ಸಿಎಂ ಯೋಗಿ ಆದಿತ್ಯನಾಥ್ ಒಬ್ಬ ಅಸಮರ್ಥ ಸಿಎಂ.
ಎಂದು ಟ್ವಿಟ್ ಮಾಡುವ ಮೂಲಕ ಉನ್ನಾವ್ ಪ್ರಕರಣದ ವಿರುದ್ಧ ಹಾಗೂ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.