ಕಲಬುರಗಿ: ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ಸಿಗದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಬಿತ್ತನೆ ಬೀಜಗಳೇ ಸಿಗ್ತಿಲ್ಲ: ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಅಸಮಾಧಾನ - ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವೀಟ್
ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ಸಿಗದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಭಾಗದಲ್ಲಿ ಹಲವು ವರ್ಷಗಳ ನಂತರ ಈ ಬಾರಿ ಹಸ್ತಕಾರ್ತಿ ಮಳೆ ಬಂದಿದೆ. ಆದರೆ ನಿದ್ರಾವಸ್ಥೆಯಲ್ಲಿರುವ ನಿಮ್ಮ ಸರ್ಕಾರದಿಂದಾಗಿ ರೈತರಿಗೆ ಕಳೆದ 1 ತಿಂಗಳಿಂದ ಬಿತ್ತನೆ ಬೀಜಗಳೇ ಸಿಗದಂತಾಗಿದೆ. ಶೇಂಗಾ, ಕಡಲೆ, ಜೋಳ, ಗೋಧಿಯ ಬಿತ್ತನೆ ಬೀಜಗಳ ಕೊರತೆ ನಮ್ಮ ಜಿಲ್ಲೆಯ ಜನರನ್ನ ಸಂಕಷ್ಟಕ್ಕೆ ದೂಡಿದೆ ಎಂದು ಪ್ರಿಯಾಂಕ್ ಟ್ವೀಟ್ ಮಾಡಿದ್ದಾರೆ.
ಬಿತ್ತನೆ ಬೀಜದ ಕೊರತೆ ಸೇರಿದಂತೆ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಅಸಡ್ಡೆತನ ತೋರಿಸುತ್ತಿದೆ. ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಬ್ಬರೂ ಉಪಮುಖ್ಯಮಂತ್ರಿ ಆಗಿದ್ದರೂ, ಜಿಲ್ಲೆಯ ರೈತರ ಗೋಳು ತಪ್ಪಿಲ್ಲ. ಜಿಲ್ಲೆಯಿಂದ ಒಬ್ಬರೂ ಸಚಿವರಾಗಿಲ್ಲ. ಯಾರ ಬಳಿ ಸಂಕಷ್ಟ ಹೇಳಿಕೊಳ್ಳಬೇಕೆಂದು ಪ್ರಿಯಾಂಕ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.