ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮ್ಮ ಪ್ರವಾಹ ಪ್ರವಾಸೋದ್ಯಮ ತಡವಾಯಿತು. ವೈಮಾನಿಕ ಸಮೀಕ್ಷೆಯ ಮೂಲಕ ನಮ್ಮ ನೋವನ್ನು ನೀವು ನೋಡಲು ಸಾಧ್ಯವಾಗುವುದಿಲ್ಲ ಎಂದು ಸಿಎಂ ವೈಮಾನಿಕ ಸಮೀಕ್ಷೆಗೆ ಶಾಸಕ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ವೈಮಾನಿಕ ಸಮೀಕ್ಷೆಯಿಂದ ಸಿಎಂ ನಮ್ಮ ನೋವನ್ನು ನೋಡಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ - Cm yediyurappa Aerial survey
ಈಗ ಭೀಮಾ ಹಾಗೂ ಕಾಗಿನಾ ನದಿ ನೀರು ಕಡಿಮೆಯಾಗಿದೆ. ಎಲ್ಲಾ ಮುಗಿದ ನಂತರ ಸಿಎಂ ವೈಮಾನಿಕ ಸಮೀಕ್ಷೆ ನಡೆಸುವುದು ಪ್ರಯೋಜನವಿಲ್ಲ, ನಮ್ಮ ನೋವನ್ನು ನೀವು ನೋಡಲು ಸಾಧ್ಯವಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
cm Aerial survey
ಈ ಕುರಿತು ವಿಡಿಯೋವೊಂದನ್ನು ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿರುವ ಅವರು, ಎಲ್ಲಾ ಮುಗಿದ ನಂತರ ಸಮೀಕ್ಷೆ ನಡೆಸಿ ಏನು ಪ್ರಯೋಜನವಿಲ್ಲ ಎಂದು ಕುಟುಕಿದ್ದಾರೆ.
ಈಗ ಭೀಮಾ ಹಾಗೂ ಕಾಗಿನಾ ನದಿ ನೀರು ಕಡಿಮೆಯಾಗಿದೆ. ಜನರ ಅಪೇಕ್ಷೆ ಪರಿಹಾರ ಮಾತ್ರ ಎಂದು ಪ್ರವಾಹ ಪೀಡಿತ ಗ್ರಾಮಗಳ ಜನರ ನೋವನ್ನು ತೋಡಿಕೊಂಡಿದ್ದಾರೆ. ಮತ್ತು ಎಲ್ಲಾ ಮುಗಿದ ನಂತರ ನಿಮ್ಮ ಸಮೀಕ್ಷೆಯ ಪ್ರಯೋಜನವಿಲ್ಲ, ನಮ್ಮ ನೋವನ್ನು ನೀವು ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.