ಕರ್ನಾಟಕ

karnataka

ETV Bharat / state

ಕಲಬುರಗಿ:  ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ಬಿಜೆಪಿ ಸರ್ಕಾರ ರೈತರ ಆದಾಯ ದುಪ್ಪಟ್ಟ ಮಾಡುತ್ತೇವೆ ಎಂದು ಹೇಳಿದೆ. ಆದರೆ ಆದಯಾ ದುಪ್ಪಟ್ಟಾಗಿಲ್ಲ. ಬದಲಿಗೆ ರೈತರ ಆತ್ಮಹತ್ಯೆ ದುಪ್ಪಟ್ಟಾಗಿದೆ ಎಂದು ಶಾಸಕ ಪ್ರಿಯಾಂಕ್​ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

priyank kharge talked against bjp
ಬಿಜೆಪಿ ವಿರುದ್ಧ ಪ್ರೀಯಾಂಕ್ ಖರ್ಗೆ ವಾಗ್ದಾಳಿ

By

Published : Dec 14, 2022, 1:39 PM IST

ಬಿಜೆಪಿ ವಿರುದ್ಧ ಪ್ರೀಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ:ಬಿಜೆಪಿ ಸರ್ಕಾರ ರೈತರ ವಿರೋಧಿ ಸರ್ಕಾರ, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರುತ್ತೇವೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಎಂಟು ವರ್ಷ ಕಳೆದಿದ್ದಾರೆ. ಆದರೆ, ಆದಾಯ ದುಪ್ಪಟ್ಟು ಆಗಿಲ್ಲ, ಬದಲಿಗೆ ಅನ್ನದಾತರ ಆತ್ಮಹತ್ಯೆ ದುಪ್ಪಟ್ಟು ಆಗಿದೆ ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೊಗರಿ ಬಿತ್ತನೆ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ . ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ತೊಗರಿ ಬೆಳೆ ನಾಶವಾಗಿದೆ. ಈಗ ನೆಟೆ ರೋಗದಿಂದ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ. ಶೇಕಡ 65 ರಷ್ಟು ತೊಗರಿ ಬೆಳೆ ನಾಶವಾದರೂ ಸರ್ಕಾರ ಗಮನ ಕೊಡುತ್ತಿಲ್ಲ.

ಸ್ಥಳೀಯ ಶಾಸಕರು ಧ್ಬನಿ ಎತ್ತುತ್ತಿಲ್ಲ:ಸ್ಥಳೀಯ ಶಾಸಕರು ಸಚಿವರು ಧ್ವನಿ ಎತ್ತುತ್ತಿಲ್ಲ. ಮೈಸೂರು ಭಾಗ, ದಕ್ಷಿಣ ಕರ್ನಾಟಕ ಭಾಗದಲ್ಲಿ‌ ಅಡಕೆ ತೆಂಗು ಲಾಸ್ ಆದರೆ ಆ ಭಾಗದ ಶಾಸಕರು ರೈತರ ಪರವಾಗಿ ನಿಲ್ಲುತ್ತಾರೆ. ಆದರೆ ಇಲ್ಲಿ ಕೇಳೋರು ಯಾರು ಇಲ್ಲ.

ಇಲ್ಲಿನ ಜನಪ್ರತಿನಿಧಿಗಳು ಕೇವಲ ರೌಡಿಗಳ ಪರ ನಿಲ್ಲೊದು, ರೌಡಿಗಳನ್ನ ಬೆಳೆಸೋದೆ, ಬೆಟ್ಟಿಂಗ್ ಮಾಡೋದು, ಕೆಕೆಆರ್‌ಡಿಬಿ ಹಣ ಹೊಡಿಯೊದು, ಶೇ 40ರಷ್ಟು ಕಮಿಷನ್ ಪಡಿಯೋದು ಮಾತ್ರ ಕಾಯಕವಾಗಿಸಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ಮಾತನಾಡಿದರೇ ಡಬಲ್ ಎಂಜಿನ್ ಸರ್ಕಾರ ಅಂತಾರೆ. ರಾಜ್ಯದ ಸಿಎಂ ತಾಕತ್, ಧಮ್ ಬಗ್ಗೆ ಮಾತಾಡ್ತಾರೆ. ತಾಕತ್ತು ಧಮ್ ಇದ್ದರೆ ಕಲಬುರಗಿಗೆ ಬಂದು ಮಾತಾಡಿ ಸಿಎಂ ಸಾಹೇಬ್ರೆ ಇಲ್ಲಿನ ರೈತರ ಗೋಳು ಕೇಳಿ ಎಂದು ಹೇಳಿದ ಖರ್ಗೆ, ಕರ್ನಾಟಕದಲ್ಲಿ 441 ಕೋಟಿ ರೂ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಹಣ ಮೃತ ರೈತರ ಖಾತೆಗೆ ವರ್ಗವಾಗಿದೆ.

ನಿರಾಣಿ ನಾಪತ್ತೆ- ಖರ್ಗೆ:ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಂತು ನಾಪತ್ತೆಯಾಗಿದ್ದಾರೆ. ಇಲ್ಲಿನ ಶಾಸಕರ ಕಿರಿಕಿರಿಗೆ ಅವರು ಜಿಲ್ಲೆಗೆ ಬರುವುದೇ ನಿಲ್ಲಿಸಿದ್ದಾರೆ. ಹೀಗಾಗಿ ಇಲಾಖೆಗಳ ರಿವ್ಯೂ ಮಿಟಿಂಗ್ ಮಾಡ್ತಿಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂದು ಟೀಕಿಸಿದರು. ಇನ್ನು ನೆಟೆ ರೋಗದಿಂದ ಸಂಕಷ್ಟದಲ್ಲಿರೋ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹಿಸಿದ ಖರ್ಗೆ, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಭಾಗದ ರೈತರ ಪರ ನಾವು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು.

ಇದೆ ವೇಳೆ, ಬಿಜೆಪಿ ಕೇಂದ್ರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯವರು ಹೇಳೋ ಮಾತಿಗೆಲ್ಲ ನಾವು ಉತ್ತರ ಕೊಡುವುದಕ್ಕಾಗಲ್ಲ, ಕರ್ನಾಟಕದಲ್ಲಿ ಪಪ್ಪೆಟ್ ಸಿಎಂ ಯಾರು.. ಹೂ ಇಸ್ ಪಪ್ಪೆಟ್ ಸಿಎಂ ಹೇಳಲಿ.. ಮೊದಲು ಬಿಜೆಪಿಯವರು ತಾವು ಏನ್ ಮಾಡ್ತಿದ್ದಾರಂತೆ ನೋಡ್ಲಿ, ಜೆಪಿ ನಡ್ಡಾ ಏನ್ ದೊಡ್ಡ ಸಾಧನೆ ಮಾಡಿದ್ದಾರಾ?, ತಮ್ಮ ಸ್ಟೇಟನಲ್ಲೇ ಜೆಪಿ ನಡ್ಡಾ ಪಕ್ಷ ಗೆಲಿಸಿಕೊಂಡು ಬರಲಿಲ್ಲ.

ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂದು ಘೋಷಿಸಲಿ ನೋಡೋಣ:ಬೊಮ್ಮಾಯಿವರೇ ನೆಕ್ಸ್ಟ್​ ಸಿಎಂ ಅಂತ ಬಿಜೆಪಿ ಘೋಷಣೆ ಮಾಡಿ ಚುನಾವಣೆಗೆ ಬರಲಿ ನೋಡೋಣ ಎಂದು ಕಲಬುರಗಿಯಲ್ಲಿ ಬಿಜೆಪಿಗೆ ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಕೂಡಾ ಹಾಕಿದ್ದಾರೆ.

ಇದನ್ನೂ ಓದಿ:ವೇದಿಕೆ ಮೇಲೆ ತಲ್ವಾರ್​ ಪ್ರದರ್ಶಿಸಿದ್ದ ಎಐಸಿಸಿ ಅಧ್ಯಕ್ಷರು: ಶ್ರೀರಾಮ ಸೇನೆ ಕಿಡಿ

ABOUT THE AUTHOR

...view details