ಕರ್ನಾಟಕ

karnataka

ETV Bharat / state

ಬಿಜೆಪಿಯವರು ಸಮಸ್ಯೆ ಮುಚ್ಚಿಡುವುದರಲ್ಲಿ ಪ್ರವೀಣರು: ಪ್ರಿಯಾಂಕ್ ಖರ್ಗೆ - ನರೇಂದ್ರ ಮೋದಿ

ಪ್ರಧಾನಿ ಬರುವಾಗ ಅವರಿಂದ ಸಾರ್ವಜನಿಕರನ್ನು ದೂರ ಇಟ್ಟು ಸಮಸ್ಯೆಗಳನ್ನು ಹೇಳದಂತೆ ಮಾಡುತ್ತಾರೆ. ಬಿಜೆಪಿಯವರಿಗೆ ಸಮಸ್ಯೆಗೆ ಪರಿಹಾರ ಹುಡುಕುವುದು ಬೇಕಿಲ್ಲ ಎಂದು ಪ್ರಿಯಾಂಕ್​ ಖರ್ಗೆ ಕಿಡಿಕಾರಿದರು.

Priyank Kharge statement on p m Narendra Modi Karnataka visit
ಪ್ರಿಯಾಂಕ್​ ಖರ್ಗೆ

By

Published : Jun 20, 2022, 5:05 PM IST

ಕಲಬುರಗಿ:ಪಠ್ಯ ಪುಸ್ತಕ ಪರಿಷ್ಕರಣೆ ಮತ್ತು ಮತ್ತಿತರ ವಿಚಾರಕ್ಕಾಗಿ ಪ್ರತಿಭಟನೆ ಎದುರಿಸುವ ಭೀತಿಯಿಂದ ಮೋದಿ ಆಗಮಿಸಿದ ಮಾರ್ಗದಲ್ಲಿರುವ ಶಾಲೆಗಳನ್ನು ಬಂದ್ ಮಾಡಿಸಿರಬಹುದು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಮಾರ್ಗ ಮಧ್ಯದ ಶಾಲೆಗಳನ್ನು ಬಂದು ಮಾಡಿರುವುದು ಎಷ್ಟರ ಮಟ್ಟಿಗೆ ‌ಸರಿ. ಕರ್ನಾಟಕಕ್ಕೆ ದೇಶದ ಪ್ರಧಾನಿ ಆಗಮಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಹ ಅನೇಕ ಪ್ರಧಾನಮಂತ್ರಿಗಳು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಮುಖ್ಯಸ್ಥರು ಸಹ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಹಿಂದೆಂದು ಶಾಲೆಗಳನ್ನು ಬಂದ್ ಮಾಡಿಸಿರುವ ನಿದರ್ಶನಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅವರು ಸಮಸ್ಯೆ ಮುಚ್ಚಿಡುವುದರಲ್ಲಿ ಪ್ರವೀಣರು: ಪ್ರಿಯಾಂಕ್ ಖರ್ಗೆ

ಪ್ರಧಾನಿ ಬಂದರೆ ಸಾರ್ವಜನಿಕರು ತಮ್ಮ ನೋವು ಹೇಳಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ. ಮೋದಿ ಬರುವಾಗ ಹಲವೆಡೆ ಸ್ಲಂಗಳನ್ನು ಬಟ್ಟೆ ಕಟ್ಟಿ ಮರೆಮಾಚಲಾಗುತ್ತದೆ. ಇವರಿಗೆ ಅಭಿವೃದ್ಧಿ ಮಾಡುವುದು ಬೇಕಾಗಿಲ್ಲ. ಇವರು ಸಮಸ್ಯೆ ಮುಚ್ಚಿಡುವುದರಲ್ಲಿ ಪ್ರವೀಣರು ಎಂದು ದೂರಿದರು.

ಇದನ್ನೂ ಓದಿ:ಮೋದಿ ಮೈಸೂರಲ್ಲಿ ಯೋಗ ಮಾಡುವ ಮೂಲಕ ಸಾಧಿಸುವುದೇನು?: ಸಿದ್ದರಾಮಯ್ಯ

ABOUT THE AUTHOR

...view details