ಕರ್ನಾಟಕ

karnataka

By

Published : Apr 6, 2022, 5:06 PM IST

ETV Bharat / state

ಬಿಜೆಪಿ ಸಾಧನೆ ಶೂನ್ಯ, ಧಾರ್ಮಿಕ ವಿಚಾರ ಮುಂದಿಟ್ಟು ಮತ ಕೇಳುವ ಪ್ರಯತ್ನ: ಪ್ರಿಯಾಂಕ್ ಖರ್ಗೆ

ಕೊರೊನಾದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ತಾಂಡವವಾಡುತ್ತಿದೆ. ಕೋವಿಡ್​ನಿಂದ ಬಡವರ ಬದುಕು ಬೀದಿಗೆ ಬಂದಿದೆ. ಸಿಎಂ ಮೌನ ವಹಿಸಿದಷ್ಟು ನಮ್ಮ ರಾಜ್ಯಕ್ಕೆ ಹಾನಿ, ನಿಮ್ಮ ನಡೆಗಳಿಂದ ಅನೇಕರು ನಗುವಂತಾಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿ ಕಾಂಗ್ರೆಸ್ ಕಚೇರಿ
ಕಲಬುರಗಿ ಕಾಂಗ್ರೆಸ್ ಕಚೇರಿ

ಕಲಬುರಗಿ: ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಆತಂಕ ಪಡ್ತಾರೆ. ಡಬಲ್ ಇಂಜಿನ್​ ಸರ್ಕಾರಕ್ಕೆ ತಮ್ಮ ಸಾಧನೆ ಜನರಿಗೆ ಹೇಳಲಿಕ್ಕೆ ಆಗ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಸಾಧನೆ ತಿಳಿಸುವುದು ಮುಖ್ಯ. ಆದರೆ, ಸರ್ಕಾರ ತನ್ನ ರಿಪೋರ್ಟ್ ಕಾರ್ಡ್ ಕೊಡ್ತಿಲ್ಲ. ಬದಲಿಗೆ ಕೋಮುಭಾವನೆ ಬಿತ್ತಿ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಮತ ಕೇಳುವುದನ್ನು ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಮಸ್ಯೆಗಳ ಬಗ್ಗೆ ಕೇಳಿದರೆ ಬಿಜೆಪಿಯವರ ಬಳಿ ಸಿದ್ಧ ಉತ್ತರವಿರುತ್ತದೆ. ಬೆಲೆ ಏರಿಕೆ ಬಗ್ಗೆ ಮಾತನಾಡಿದ್ರೆ 'ದಿ ಕಾಶ್ಮೀರ್​ ಫೈಲ್ಸ್' ನೋಡಿದಿರಾ ಅಂತಾರೆ. ಕೋವಿಡ್ ಪರಿಹಾರ ಕೇಳಿದ್ರೆ ಹಿಜಾಬ್ ಬಗ್ಗೆ ಮಾತಾಡ್ತಾರೆ. ರೈತರ ಸಮಸ್ಯೆ ಬಗ್ಗೆ ಮಾತನಾಡಿದ್ರೆ ಜಟ್ಕಾ ಕಟ್ ಅಂತಾರೆ. ನಿರುದ್ಯೋಗದ ಬಗ್ಗೆ ಮಾತಾಡಿ ಅಂದರೆ ಭಗವದ್ಗೀತೆ ಓದಿದ್ದೀರಾ ಅಂತಾ ಕೇಳ್ತಾರೆ. ಮಾವಿನ ಹಣ್ಣು, ಹಲಾಲ್ ಬಗ್ಗೆ ಮಾತಾಡ್ತಾರೆ. ಅವರ ಜಾಣತನಕ್ಕೆ ಮೆಚ್ಚಬೇಕು ಎಂದು ವ್ಯಂಗ್ಯವಾಡಿದರು.

ಬೇವಿನ ಸಸಿ ನೆಟ್ಟು ಮಾವಿನ ಹಣ್ಣು ತಿನ್ನಲು ಆಗಲ್ಲ:ಬಡವರು ಊಟ ಮಾಡುತ್ತಿದ್ದ ಇಂದಿರಾ ಕ್ಯಾಂಟೀನ್ಅನ್ನು ಬಿಜೆಪಿಯವರು ಮುಚ್ಚುತ್ತಿದ್ದಾರೆ. ಮತ್ತೊಂದೆಡೆ ಹಲಾಲ್ ಕಟ್ ಬಗ್ಗೆ ಮಾತನಾಡುತ್ತಾರೆ. ಬೇವಿನ ಸಸಿ ನೆಟ್ಟು ಮಾವಿನ ಹಣ್ಣು ತಿನ್ನಲು ಆಗಲ್ಲ. ಬಿಜೆಪಿಯವರು ಭಾರತವನ್ನು ಆರ್ಥಿಕವಾಗಿ ಪಾಕಿಸ್ತಾನ, ಅಪಘಾನಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಪ್ರಿಯಾಂಕ್​ ಖರ್ಗೆ ಹರಿಹಾಯ್ದರು.

ಬಡವರ ಮಕ್ಕಳಿಗೆ ಶಾಲ್ ಹಾಕಿ ಕಳುಹಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಾಲ್ ಹಾಕಿ ಬಿಡಿ ನೋಡೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಕೊರೊನಾದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶ, ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಕೋವಿಡ್​ನಿಂದ ಬಡವರ ಬದುಕು ಬೀದಿಗೆ ಬಂದಿದೆ. ಸಿಎಂ ಮೌನ ವಹಿಸಿದಷ್ಟು ನಮ್ಮ ರಾಜ್ಯಕ್ಕೆ ಹಾನಿ, ನಿಮ್ಮ ನಡೆಗಳಿಂದ ಅನೇಕರು ನಗುವಂತಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಓದಿ:ಜಾತಿ ವರ್ಗೀಕರಣ ಪಟ್ಟಿಯಲ್ಲಿರುವಂತೆ ಕಾಪಾಳರ ವರದಿ ತಯಾರಿಸಿ ಪರಿಶಿಷ್ಟ ಪಂಗಡ ಆಯೋಗಕ್ಕೆ ಸಲ್ಲಿಸಲಾಗುತ್ತೆ : ಕೆ. ಜಯಪ್ರಕಾಶ ಹೆಗ್ಡೆ

For All Latest Updates

ABOUT THE AUTHOR

...view details