ಕರ್ನಾಟಕ

karnataka

ETV Bharat / state

ತಿರಂಗಾ ರ‍್ಯಾಲಿಗೆ ಪಾಲಿಕೆ ವಾಹನ ಬಳಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ - kalburagi Priyank Kharge outrage

ಕಲಬುರಗಿಯಲ್ಲಿ ನಡೆಸಿದ ಬೃಹತ್ ತಿರಂಗಾ ರ‍್ಯಾಲಿ ವೇಳೆ ಮಹಾನಗರ ಪಾಲಿಕೆ ವಾಹನಗಳನ್ನು ಬಳಸಿಕೊಂಡಿದ್ದನ್ನು ಖಂಡಿಸಿ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kalburagi
ತಿರಂಗಾ ರ‍್ಯಾಲಿಗೆ ಮಹಾನಗರ ಪಾಲಿಕೆ ವಾಹನಗಳ ಬಳಕೆ

By

Published : Jan 11, 2020, 11:52 PM IST

ಕಲಬುರಗಿ:ಪೌರತ್ವ ಕಾಯ್ದೆ ಬೆಂಬಲಿಸಿ ಇಂದು ಜಿಲ್ಲೆಯಲ್ಲಿ ನಡೆಸಿದ ಬೃಹತ್ ತಿರಂಗಾ ರ‍್ಯಾಲಿ ವೇಳೆ ಮಹಾನಗರ ಪಾಲಿಕೆ ವಾಹನಗಳನ್ನು ಬಳಸಿಕೊಂಡಿರುವುದರ ವಿರುದ್ಧ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನಾಗರೀಕ ಸಮಿತಿ ವತಿಯಿಂದ ಏರ್ಪಡಿಸಿದ್ದ ರ‍್ಯಾಲಿ ವೇಳೆ ಕಾರ್ಯಕರ್ತರು ಮಹಾನಗರ ಪಾಲಿಕೆ ವಾಹನದಲ್ಲಿ ಬಂದಿರೋ ದೃಶ್ಯಗಳನ್ನು ಕೆಲವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಕಸ ತೆಗೆದುಕೊಂಡು ಹೋಗುವ ವಾಹನದಲ್ಲಿ ಧ್ವಜಗಳನ್ನು ಹಿಡಿದುಕೊಂಡು ಬರುತ್ತಿದ್ದು, ಇದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಾರ್ಯಕರ್ತರನ್ನು ಕರೆತರಲು ಪಾಲಿಕೆ ವಾಹನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಟ್ವೀಟ್​ ಮೂಲಕ ಆರೋಪಿಸಿದ್ದಾರೆ.

ಇನ್ನು ಕಾರ್ಯಕರ್ತರು ಪಾಲಿಕೆ ವಾನಹಗಳಲ್ಲಿ ಹೋಗುತ್ತಿರುವ ಫೋಟೋ ಹಾಕಿ ಪೋಸ್ಟ್ ಮಾಡಿ ಪಾಲಿಕೆ ವಾಹನಗಳ ದುರ್ಬಳಕೆಯನ್ನು ಖಂಡಿಸಿದ್ದಾರೆ.

ABOUT THE AUTHOR

...view details