ಕಲಬುರಗಿ: ಕೃಷಿ ನೀತಿ ಹಾಗೂ ಬೆಲೆ ನಿಗದಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಕೇಂದ್ರ ಸಚಿವರ ರಾಜೀನಾಮೆ ಕುರಿತು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಕೃಷಿ ನೀತಿ, ಬೆಲೆ ನಿಗದಿ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ - Mla priyank kharge tweet
ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮೂಲಕ ಕೃಷಿ ನೀತಿ ಹಾಗೂ ಬೆಲೆ ನಿಗದಿ ಮಸೂದೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Priyank kharge
ಬಿಜೆಪಿ ಪ್ರಚಾರ ಮಾಡುವ ಮಟ್ಟಿಗೆ ಕೇಂದ್ರ ಸರ್ಕಾರದ ಕೃಷಿ ನೀತಿ ಹಾಗೂ ಬೆಲೆ ನಿಗದಿ ಮಸೂದೆ ರೈತರ ಪರವಾಗಿದ್ದರೆ, ಪ್ರತಿಭಟಿಸುತ್ತಿರುವ ರೈತರಿಗೆ ಮತ್ತು ಮಿತ್ರ ಪಕ್ಷಗಳಿಗೆ ಹಾಗೂ ಕೇಂದ್ರ ಮಂತ್ರಿಗಳಿಗೆ ಯಾಕೆ ಮನವೊಲಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
"ವಿಶ್ವದ ನಾಯಕರನ್ನೆಲ್ಲಾ ಮೆಚ್ಚಿಸುವಂತೆ ಮಾತನಾಡುವ ಮೋದಿಯವರು ರೈತರನ್ನು, ಸರ್ಕಾರದ ಮಂತ್ರಿಯನ್ನು ಹಾಗೂ ಮಿತ್ರಪಕ್ಷವನ್ನು ಮನವೊಲಿಸಲಿಲ್ಲವೇಕೆ ? " ಎಂದು ಕುಟುಕಿದ್ದಾರೆ.