ಕರ್ನಾಟಕ

karnataka

ETV Bharat / state

ಸ್ನೇಹಿತನ ಕೊಲೆ ವಿಚಾರಣಾಧೀನ ಕೈದಿ ಕಲಬುರಗಿ ಆಸ್ಪತ್ರೆಯಿಂದ ಪರಾರಿ - ಜಿಮ್ಸ್ ಆಸ್ಪತ್ರೆ

ಕಾರಾಗೃಹ ವಿಚಾರಣಾಧೀನ ಕೈದಿಯೊಬ್ಬ ಜಿಮ್ಸ್ ಆಸ್ಪತ್ರೆ ಜೈಲ್ ವಾರ್ಡ್‌ನ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ.

hospital
ಕಲಬುರಗಿ ಆಸ್ಪತ್ರೆಯಿಂದ ಪರಾರಿ

By

Published : Jul 14, 2021, 12:09 PM IST

ಕಲಬುರಗಿ:ಜಿಮ್ಸ್ ಆಸ್ಪತ್ರೆ ಜೈಲ್ ವಾರ್ಡ್‌ನ ಕಿಟಕಿಯಿಂದ ಹೊರ ಜಿಗಿದು ಕಾರಾಗೃಹ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿ ಸಿದ್ದಪ್ಪ ಅಲ್ಲೂರ್ (22) ಪರಾರಿಯಾದ ಕೈದಿಯಾಗಿದ್ದಾನೆ.

ಸಿದ್ದಪ್ಪ ಎರಡು ತಿಂಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಆರೋಪದಲ್ಲಿ ಕೇಂದ್ರ ಕಾರಾಗೃಹ ಸೇರಿದ್ದ. ಅಸಹಜ ವರ್ತನೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಯ ಜೈಲ್ ವಾರ್ಡ್‌ಗೆ ಈತನನ್ನು ಶಿಫ್ಟ್ ಮಾಡಲಾಗಿತ್ತು.

ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಿದ್ದಪ್ಪ ಪರಾರಿಯಾಗಿದ್ದಾನೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details