ಕರ್ನಾಟಕ

karnataka

ETV Bharat / state

ಸ್ವಚ್ಛ ಕಲಬುರಗಿ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶ್‌.. - ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಸೂಚನೆ

ಈಗ ಮಳೆಗಾಲವಾದ್ದರಿಂದ ಡೆಂಘೀ ಮತ್ತು ಚಿಕೂನ್‍ಗುನ್ಯಾ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರಿತ್ತೆ. ತಂಡಗಳನ್ನು ರಚಿಸಿ ಮನೆ-ಮನೆಗೆ ಭೇಟಿ ನೀಡಿ ಅಲ್ಲಿನ ಸ್ಥಳ ಪರಿಶೀಲಿಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಡೆಂಘೀ ಮತ್ತು ಚಿಕೂನ್‍ಗುನ್ಯಾ ಜ್ವರದ ನಿಯಂತ್ರಣದಲ್ಲಿ ಲಾರ್ವಾ ಸಮೀಕ್ಷೆ, ಫಾಗಿಂಗ್, ತ್ಯಾಜ್ಯ ವಸ್ತುಗಳ ವಿಲೇವಾರಿ ಪ್ರಮುಖ ಅಂಶ. ಈ ಎಲ್ಲದರ ಬಗ್ಗೆ ಮುಂಜಾಗ್ರತೆ ವಹಿಸುವತ್ತ ಅಧಿಕಾರಿಗಳು ಚಿತ್ತ ಹರಿಸಬೇಕು. ಸ್ವಚ್ಛತೆಗೆ ಕ್ರಮ ಕೈಗೊಂಡರೆ ಇಂತಹ ಮಾರಕ ಕಾಯಿಲೆಯಿಂದ ದೂರ ಉಳಿಯಬಹುದು ಎಂದರು

ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಡೆಂಗ್ಯೂ ಖಾಯಿಲೆ ಕುರಿತು ಮಾಹಿತಿ ನೀಡಿದರು

By

Published : Aug 2, 2019, 1:51 PM IST

ಕಲಬುರಗಿ: ಮಹಾಮಾರಿ ಡೆಂಘೀ ಖಾಯಿಲೆ ತಡೆಗಟ್ಟಲು ವ್ಯಾಪಕ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅಭಿಪ್ರಾಯಪಟ್ಟಿದ್ದಾರೆ.

ಸ್ಚಚ್ಛ ಕಲಬುರಗಿ ಅಭಿಯಾನ ಕುರಿತ ಕರ ಪತ್ರ ಬಿಡುಗಡೆ..

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಡೆಂಘೀ ಮತ್ತು ಚಿಕೂನ್‍ ಗುನ್ಯಾ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಕಳೆದ ಎರಡೂವರೆ ವರ್ಷದಲ್ಲಿ ಕಲಬುರಗಿ ನಗರದಲ್ಲಿ 92 ಜನರಿಗೆ ಡೆಂಘೀ ಸೋಂಕು ಹರಡಿದೆ. ಪ್ರತಿ ತಿಂಗಳಲ್ಲಿ 2 ದಿನ ಮನೆ-ಮನೆಗೆ ತೆರಳಿ ತಪಾಸಣೆ ಮಾಡಿದ್ರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಡೆಂಘೀ ಜ್ವರ ಮತ್ತು ಚಿಕೂನ್‍ಗುನ್ಯಾ ನಿಯಂತ್ರಿಸಲಾಗುತ್ತಿಲ್ಲ. ಸೊಳ್ಳೆಗಳ ಕಚ್ಚುವಿಕೆಯಿಂದ ಈ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಇವುಗಳ ಬಗ್ಗೆ ಮುಂಚಿತವಾಗಿಯೇ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕ ಎಂದರು.

ಈಗ ಮಳೆಗಾಲವಾದ್ದರಿಂದ ಡೆಂಘೀ ಮತ್ತು ಚಿಕೂನ್‍ಗುನ್ಯಾ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರಿತ್ತೆ. ತಂಡಗಳನ್ನು ರಚಿಸಿ ಮನೆ-ಮನೆಗೆ ಭೇಟಿ ನೀಡಿ ಅಲ್ಲಿನ ಸ್ಥಳ ಪರಿಶೀಲಿಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.ಡೆಂಘೀ ಮತ್ತು ಚಿಕೂನ್‍ಗುನ್ಯಾ ಜ್ವರದ ನಿಯಂತ್ರಣದಲ್ಲಿ ಲಾರ್ವಾ ಸಮೀಕ್ಷೆ, ಫಾಗಿಂಗ್, ತ್ಯಾಜ್ಯ ವಸ್ತುಗಳ ವಿಲೇವಾರಿ ಪ್ರಮುಖ ಅಂಶ. ಈ ಎಲ್ಲದರ ಬಗ್ಗೆ ಮುಂಜಾಗ್ರತೆ ವಹಿಸುವತ್ತ ಅಧಿಕಾರಿಗಳು ಚಿತ್ತ ಹರಿಸಬೇಕು. ಸ್ವಚ್ಛತೆಗೆ ಕ್ರಮ ಕೈಗೊಂಡರೆ ಇಂತಹ ಮಾರಕ ಕಾಯಿಲೆಯಿಂದ ದೂರ ಉಳಿಯಬಹುದು ಎಂದರು.

ಮಹಾನಗರ ಪಾಲಿಕೆಯ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಕೆ ಮಾಧವರಾವ ಪಾಟೀಲ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಕಲಬುರಗಿ ಮಹಾನಗರ ಪಾಲಿಕೆಯ "ಸ್ಚಚ್ಛ ಕಲಬುರಗಿ ಅಭಿಯಾನ" ಕುರಿತು ಕರ ಪತ್ರ ಬಿಡುಗಡೆಗೊಳಿಸಿದರು.

ABOUT THE AUTHOR

...view details