ಕಲಬುರಗಿ: ನಗರದ ನೂತನ ವಿದ್ಯಾಲಯದಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ದತೆ ಮಾಡಲಾಗಿದೆ.
ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶ ಇಂದು.. ಸಿದ್ಧತೆ ಪೂರ್ಣ - BJP Jansewaka Convention
ಕಲಬುರಗಿಯಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ದತೆ ಮಾಡಿಕೊಳ್ಳಲಾಗಿದ್ದು, ನಗರದಲ್ಲೆಡೆ ಬಿಜೆಪಿ ಬಾವುಟ, ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ.
![ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶ ಇಂದು.. ಸಿದ್ಧತೆ ಪೂರ್ಣ preparations-for-bjp-jansewaka-convention-in-kalaburagi](https://etvbharatimages.akamaized.net/etvbharat/prod-images/768-512-10197788-thumbnail-3x2-sow.jpg)
ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ಧತೆ
ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ಧತೆ
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನಿಸಲು ಹಾಗೂ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ತಯಾರಿ ದೃಷ್ಟಿಯಿಂದ ಬಿಜೆಪಿ ಜನಸೇವಕ ಸಮಾವೇಶ ಆಯೋಜಿಸಲಾಗಿದೆ. ಕಲಬುರಗಿಯಲ್ಲಿ ಇಂದು ನಡೆಯುವ ಸಮಾವೇಶದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು, ಸಚಿವರು, ಸಂಸದರು ಭಾಗಿಯಾಗಲಿದ್ದಾರೆ.
ಇಂದು ಸಂಜೆ 5 ಗಂಟೆಗೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರದಲ್ಲೆಡೆ ಬಿಜೆಪಿ ಬಾವುಟ, ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ.