ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕಲುಷಿತ ನೀರು ಸೇವಿಸಿ ಗರ್ಭಿಣಿ ಸಾವು, ಹಲವರು ಅಸ್ವಸ್ಥ - drink Contaminated water

ಗ್ರಾಮದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರಿಗೆ ಮಿಶ್ರಣವಾದ ಪರಿಣಾಮ ಒಬ್ಬರು ಸಾವಿಗೀಡಾಗಿದ್ದು, ಹಲವರಿಗೆ ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದಾರೆ.

Pregnant woman died after drink Contaminated water
ಕಲುಷಿತ ನೀರು ಸೇವನೆ: ಆರು ತಿಂಗಳ ಗರ್ಭಿಣಿ ಸಾವು

By

Published : Oct 19, 2021, 9:22 AM IST

ಕಲಬುರಗಿ: ಕಲುಷಿತ ನೀರು ಸೇವಿಸಿ ಗರ್ಭಿಣಿ ಸಾವನ್ನಪ್ಪಿ 12 ಜನರು ಅಸ್ವಸ್ಥರಾದ ಘಟನೆ ಆಳಂದ ತಾಲೂಕಿನ ಬೋಳನಿ ಗ್ರಾಮದಲ್ಲಿ ನಡೆದಿದೆ.

ಆರು ತಿಂಗಳ ಗರ್ಭಿಣಿ ಮಲ್ಲಮ್ಮ ಸಾವಿಗೀಡಾದ ದುರ್ದೈವಿ. ಮಳೆ ನೀರಿನ ಜೊತೆ ಕುಡಿಯುವ ನೀರಿನ ಪೈಪ್​ಗೆ ಚರಂಡಿ ನೀರು ಮಿಶ್ರಣವಾಗಿ ಈ ಅವಘಡ ಉಂಟಾಗಿದೆ ಎಂದು ತಿಳಿದುಬಂದಿದೆ.

ಗ್ರಾಮದ ಬಹುತೇಕ ನಿವಾಸಿಗಳು ತೀವ್ರ ವಾಂತಿಬೇಧಿ ಕಾಣಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ.

ABOUT THE AUTHOR

...view details