ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ - ರೈತರಿಗೆ ಸಂಕಷ್ಟ

ಕಲಬುರಗಿ ಜಿಲ್ಲೆಯ ಚಿಮ್ಮಾಇದಲಾಯಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಲಬುರಗಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

By

Published : Jul 29, 2019, 6:27 PM IST

ಕಲಬುರಗಿ: ವರುಣನ ಕೃಪೆಗಾಗಿ ಜಿಲ್ಲೆಯ ಚಿಮ್ಮಾಇದಲಾಯಿ ಗ್ರಾಮಸ್ಥರು ದೇವರ ಮೊರೆ ಹೊಗಿದ್ದು, ಮಳೆಗಾಗಿ ಸಪ್ತ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು

ಮಳೆಗಾಲ ಆರಂಭವಾಗಿ ಎರಡು ತಿಂಗಳು ಮುಗಿಯುತ್ತಾ ಬಂದರು ಇಲ್ಲಿಯವರೆಗೆ ಬಿತ್ತನೆಗೆ ಯೋಗ್ಯವಾದ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ.‌ ಆದ್ದರಿಂದ ಮಳೆರಾಯನ‌ ಕೃಪೆಗಾಗಿ ಏಳು ದಿನಗಳ ಕಾಲ ಇಡೀ ರಾತ್ರಿ ಗ್ರಾಮದ ಹನುಮನ‌ ದೇವಾಲಯದಲ್ಲಿ ಭಜನೆ ಮತ್ತು ವಿಶೇಷ ಪೂಜೆ ನೆರವೇರಿಸಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಇನ್ನಾದರು ವರುಣ ಮುನಿಸು ಬಿಟ್ಟು ದಯೆ ತೋರಲಿ ಎಂದು ಪ್ರಾರ್ಥಿಸಿದ್ದಾರೆ.

ABOUT THE AUTHOR

...view details