ಕರ್ನಾಟಕ

karnataka

ETV Bharat / state

ಬಲಿಗಾಗಿ ಕಾದು ಕುಳಿತಿದೆ ವಿದ್ಯುತ್​​ ಕಂಬ: ಜೆಸ್ಕಾಂ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇಕೆ? - Chittapur Taluk

ವಿದ್ಯುತ್ ಕಂಬ ರಸ್ತೆಗೆ ಹೊಂದಿಕೊಂಡಿದ್ದು ದಿನನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಅಲ್ಲದೆ ಮಳೆಗಾಲ‌ ಪ್ರಾರಂಭವಾಗಿದ್ದು ಗಾಳಿ, ಮಳೆಗೆ ಕಂಬ ಮನೆಗಳ ಮೇಲೆ ಬೀಳುವ ಆತಂಕ ಎದುರಾಗಿದೆ.

Power pole damaged near busy street but officers look after it
ಬಲಿಗಾಗಿ ಕಾದು ಕುಳಿತಿದೆ ವಿದ್ಯುತ್​​ ಕಂಬ...ಕಣ್ಣಿದ್ದು ಕುರುಡಾದ ಆಡಳಿತ

By

Published : Jul 30, 2020, 6:51 PM IST

ಕಲಬುರಗಿ: ವಿದ್ಯುತ್ ಕಂಬವೊಂದು ಸವೆದು ಹೋಗಿ ಅಪಾಯಕ್ಕೆ ಕಾದು‌ ನಿಂತಿದ್ದರೂ ಸಹ ಜೆಸ್ಕಾಂ ಅಧಿಕಾರಿಗಳು ‌ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದನ್ನು ಬದಲಾಯಿಸುವ ಕಾರ್ಯಕ್ಕೆ ಅಣಿಯಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದ ವಾರ್ಡ್ ನಂ.03ರಲ್ಲಿ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬ ಕೆಳಭಾಗದಲ್ಲಿ ಸಿಮೆಂಟ್​​​ ಸಂಪೂರ್ಣ ಹಾಳಾಗಿದೆ. ಅಲ್ಲದೆ ಯಾವ ಸಮಯದಲ್ಲೂ ಬೀಳುವ ಸ್ಥಿತಿಗೆ ತಲುಪಿದೆ.

ಬಲಿಗಾಗಿ ಕಾದು ಕುಳಿತಿದೆ ವಿದ್ಯುತ್​​ ಕಂಬ, ಕಣ್ಣಿದ್ದು ಕುರುಡಾದ ಆಡಳಿತ

ವಿದ್ಯುತ್ ಕಂಬ ರಸ್ತೆಗೆ ಹೊಂದಿಕೊಂಡಿರುವುದರಿಂದ ದಿನನಿತ್ಯ ಸಾವಿರಾರು ಜನ ಓಡಾಡುತ್ತಾರೆ, ಅಲ್ಲದೆ ಮಳೆಗಾಲ‌ ಪ್ರಾರಂಭವಾಗಿದ್ದು ಗಾಳಿ, ಮಳೆಗೆ ಕಂಬ ಮನೆಗಳ ಮೇಲೆ ಬೀಳುವ ಆತಂಕ ಎದುರಾಗಿದೆ.

ಈ‌ ಕುರಿತು ಅನೇಕ‌ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ರೈತ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲೂರಕರ್ ಆರೋಪಿಸಿದ್ದಾರೆ. ಈ ಕೊಡಲೇ ಜೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ವಿದ್ಯುತ್ ಕಂಬ ದುರಸ್ಥಿ ಮಾಡುವಂತೆಯೂ ಆಗ್ರಹಿಸಿದ್ದಾರೆ.

ABOUT THE AUTHOR

...view details