ಕಲಬುರಗಿ: ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ನಡುವೆ ಪೌರತ್ವ ಕಾಯ್ದೆ ವಿರೋಧಿಸಿ ನಾಳೆ ಕಲಬುರಗಿ ಬಂದ್‌ಗೆ ಸಿದ್ದತೆ ನಡೆಸಿರುವ ಪೀಪಲ್ಸ್ ಫೋರಂ ಮುಖಂಡರನ್ನು ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೌರತ್ವ ಕಾಯ್ದೆಗೆ ವಿರೋಧ, ನಾಳೆ ಕಲಬುರಗಿ ಬಂದ್‌ಗೆ ಸಿದ್ದತೆ: ಪೀಪಲ್ಸ್ ಫೋರಂ ಮುಖಂಡರ ಬಂಧನ - ಪೀಪಲ್ಸ್ ಪೋರಂ ಮುಖಂಡರಿಂದ ಪೌರತ್ವ ಕಾಯ್ದೆ ವಿರೋಧಿಸಿ ನಾಳೆ ಕಲಬುರಗಿ ಬಂದ್‌ಗೆ ಸಿದ್ದತೆ
ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ನಡುವೆ ಪೌರತ್ವ ಕಾಯ್ದೆ ವಿರೋಧಿಸಿ ನಾಳೆ ಕಲಬುರಗಿ ಬಂದ್‌ಗೆ ಸಿದ್ದತೆ ನಡೆಸಿರುವ ಪೀಪಲ್ಸ್ ಫೋರಂ ಮುಖಂಡರನ್ನು ನಗರ ಪೊಲೀಸರು ವಶಕ್ಕೆ ಪಡೆದರು.
ಪೌರತ್ವ ಕಾಯ್ದೆ ವಿರೋಧಿಸಿ ನಾಳೆ ಕಲಬುರಗಿ ಬಂದ್‌ಗೆ ಸಿದ್ದತೆ...ಪೀಪಲ್ಸ್ ಪೋರಂ ಮುಖಂಡರನ್ನು ಬಂಧನ...
ಬಂದ್‌ಗೆ ಸಹಕರಿಸುವಂತೆ ಮಾರುಕಟ್ಟೆಗೆ ತೆರಳಿ ನಾಳೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಕರ ಪತ್ರ ನೀಡುವ ಮೂಲಕಪೀಪಲ್ಸ್ ಫೋರಂನ ಕೆಲ ಮುಖಂಡರು ಮನವಿ ಮಾಡುತ್ತಿದ್ದರು. ಈ ವೇಳೆ ಅವರನ್ನು ತಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರುತಿ ಮಾನ್ಪಡೆ ಮಾತನಾಡಿ, ನಮ್ಮ ಮೇಲೆ ಎಷ್ಟೇ ಒತ್ತಡ ಹೇರಿದರೂ ಯಾವುದೇ ಕಾರಣಕ್ಕೂ ಬಂದ್ ಹಿಂಪಡೆಯುವುದಿಲ್ಲ. ಮುಸ್ಲಿಂ ಹಾಗೂ ದಲಿತ ಪರ ಸಂಘಟನೆಗಳೂ ಸೇರಿದಂತೆ ಒಟ್ಟು 20 ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ ಎಂದರು.