ಕಲಬುರಗಿ: ವಿಕೇಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದ 66 ವಾಹನಗಳನ್ನು ಇಂದು ಕಲಬುರಗಿ ನಗರ ಪೊಲೀಸರು ಸೀಜ್ ಮಾಡಿದ್ದಾರೆ.
ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯ ಓಡಾಟ: ಕಲಬುರಗಿಯಲ್ಲಿ 66 ವಾಹನಗಳು ಸೀಜ್ - police seized vehicles in kalburgi
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಅನಗತ್ಯವಾಗಿ ರಸ್ತೆಗಿಳಿದ 66 ವಾಹನಗಳನ್ನು ಕಲಬುರಗಿ ಪೊಲೀಸರು ಸೀಜ್ ಮಾಡಿದ್ದಾರೆ.

kalburgi
ಇಂದು ಬೆಳಗ್ಗೆ 10 ಗಂಟೆಯಿಂದ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಸಾಕಷ್ಟು ಜಾಗೃತಿ ಮೂಡಿಸಿದರೂ ಅನಗತ್ಯವಾಗಿ ರಸ್ತೆಗೆ ಇಳಿದ ದ್ವಿಚಕ್ರ ವಾಹನ, ಮೂರು ಚಕ್ರದ ವಾಹನ ಹಾಗೂ ನಾಲ್ಕು ಚಕ್ರಗಳ ವಾಹನಗಳು ಸೇರಿ ಒಟ್ಟು 66 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.
ಇದಲ್ಲದೆ ಕಳೆದ 22ರಂದು ನೈಟ್ ಕರ್ಫ್ಯೂ ವೇಳೆ 29 ವಾಹನ ಮತ್ತು 23ರ ನೈಟ್ ಕರ್ಫ್ಯೂ ವೇಳೆ 21 ವಾಹನಗಳನ್ನು ನಗರದ ಪೊಲೀಸರು ಜಪ್ತಿ ಮಾಡಿದ್ದಾಗಿ ಎಎಸ್ಪಿ ಅಂಶುಕುಮಾರ ಮಾಹಿತಿ ನೀಡಿದ್ದಾರೆ.