ಕಲಬುರಗಿ: ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಲು ರೈತರೊಬ್ಬರು ಎತ್ತಿನ ಬಂಡಿಯಲ್ಲಿ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿರುವುದನ್ನು ಕಂಡು ಪಿಎಸ್ಐ ಒಬ್ಬರು ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದ್ದಾರೆ.
ಕೊರೊನಾದಿಂದ ರಕ್ಷಣೆ ಪಡೆಯಲು ಹೆಲ್ಮೆಟ್ ಧರಿಸಿದ ರೈತ: ಎತ್ತಿನಗಾಡಿಯಲ್ಲಿ ಬಂದ ರೈತನಿಗೆ ಪಿಎಸ್ಐ ಸೆಲ್ಯೂಟ್ - ಪೊಲೀಸ್
ರೈತರೊಬ್ಬರು ಹೊಲದಿಂದ ಎತ್ತಿನಗಾಡಿಯಲ್ಲಿ ಬರುವಾಗ ಹೆಲ್ಮೆಟ್ ಧರಿಸಿಕೊಂಡು ಬರುತ್ತಿರುವುದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ವಾಹನದಿಂದ ಕೆಳಗೆ ಇಳಿದು ರೈತನಿಗೆ ಸೆಲ್ಯೂಟ್ ನೀಡಿ ಗೌರವಿಸಿದ್ದಾರೆ.
ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಕೊರೊನಾ ಶಂಕಿತನೊಬ್ಬ ಪುಣೆ ಆಸ್ಪತ್ರೆಯಿಂದ ಪರಾರಿಯಾಗಿ ಬಂದ ಘಟನೆ ಇತ್ತೀಚಿಗಷ್ಟೇ ಭಾರಿ ಸದ್ದು ಮಾಡಿತ್ತು. ಇದೀಗ ರೈತರೊಬ್ಬರು ಹೊಲದಿಂದ ಎತ್ತಿನಗಾಡಿಯಲ್ಲಿ ಬರುವಾಗ ಹೆಲ್ಮೆಟ್ ಧರಿಸಿಕೊಂಡು ಬರುತ್ತಿರುವುದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ವಾಹನದಿಂದ ಕೆಳಗೆ ಇಳಿದು ರೈತ ಲಕ್ಕಪ್ಪ ಕೊರಬಾ ಅವರಿಗೆ ಸೆಲ್ಯೂಟ್ ನೀಡಿ ಗೌರವಿಸಿದ್ದಾರೆ.
ಅಕ್ಷರಸ್ಥರಿಗೆ ಇರದೇ ಇರುವ ಜ್ಞಾನ ರೈತರೊಬ್ಬರಿಗೆ ಇರುವುದನ್ನು ಕಂಡು ಮೂಕವಿಸ್ಮಿತನಾದೆ ಎಂದು ಪಿಎಸ್ಐ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿಎಸ್‍ಐ ಸುರೇಶ್ ಕುಮಾರ್ ರೈತನಿಗೆ ಸೆಲ್ಯೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.