ಕಲಬುರಗಿ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿದ್ದು, ಅನವಶ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಕಸ ಗುಡಿಸುವ ಶಿಕ್ಷೆ ನೀಡುವ ಮೂಲಕ ಪಾಠ ಕಲಿಸಿದ್ದಾರೆ.
ಲಾಕ್ ಡೌನ್ ಆದೇಶ ಮೀರಿ ಹೊರ ಬಂದವರಿಗೆ ಕಸ ಗುಡಿಸುವ ಶಿಕ್ಷೆ... ಕಲಬುರಗಿ ಜನರಿಗೆ ಪಾಠ ಕಲಿಸಿದ ಪೊಲೀಸಪ್ಪ - ಕಲಬುರಗಿ ಲೇಟೆಸ್ಟ್ ನ್ಯೂಸ್
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹೊರಗೆ ಬಂದ ಜನರಿಗೆ ಪೊಲೀಸರು ಕಸ ಗುಡಿಸುವ ಶಿಕ್ಷೆ ನೀಡಿದ್ದಾರೆ. ಈ ಮೂಲಕ ಕೊರನಾ ವಿರುದ್ಧದ ಹೋರಾಟಕ್ಕೆ ಸಹಕರಿಸಲು ಹೊಸ ಪಾಠ ಕಲಿಸಿದ್ದಾರೆ.

ಸರ್ಕಾರದ ಆದೇಶ ಉಲ್ಲಂಘಿಸಿದವರಿಂದ ಕಸ ಗೂಡಿಸಿ ನೀತಿ ಪಾಠ ಹೇಳಿಕೊಟ್ಟ ಪೊಲೀಸಪ್ಪಾ
ಸರ್ಕಾರದ ಆದೇಶ ಉಲ್ಲಂಘಿಸಿ ಹೊರಬಂದವರಿಗೆ ಕಸ ಗುಡಿಸುವ ಶಿಕ್ಷೆ
ಸರ್ಕಾರದ ಆದೇಶ ಉಲ್ಲಂಘಿಸಿ ರಸ್ತೆ ಮೇಲೆ ತಿರುಗುತ್ತಿದ್ದವರಿಗೆ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದು, ನಗರದ ಸೂಪರ್ ಮಾರ್ಕೆಟ್ ಬಳಿ ಸುಖಾ ಸುಮ್ಮನೆ ಓಡಾಡುತ್ತಿವರಿಂದಲೇ ಕಸ ಗುಡಿಸುವ ಮೂಲಕ ಪಾಠ ಕಲಿಸಿದ್ದಾರೆ. ಮನೆಯಿಂದ ಹೊರಬಾರದು ಎಂದು ಎಷ್ಟು ಬಾರಿ ಹೇಳಿದರೂ ಅರಿತು ಕೊಳ್ಳದ ಹಿನ್ನೆಲೆಯಲ್ಲಿ ಈ ರೀತಿಯ ಶಿಕ್ಷೆ ನೀಡುವ ಮೂಲಕ ಪೊಲೀಸರು ಪಾಠ ಕಲಿಸಿದ್ದಾರೆ.
ಸ್ವಚ್ಛತಾ ಕಾರ್ಯ ಮಾಡಿಸಿದ ಬಳಿಕ ಇನ್ಸ್ಪೆಕ್ಟರ್ ಶಕೀಲ ಅಂಗಡಿ, ಪ್ರಮಾಣ ವಚನ ಬೋಧಿಸಿ ಕೊರೊನಾ ತಡೆಗಟ್ಟುವ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ತಿಳಿ ಹೇಳಿದರು.