ಕಲಬುರಗಿ:ಕೋವಿಡ್ನಿಂದ ಮೃತಪಟ್ಟಿರುವ ಇಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ನಾಗೇನಳ್ಳಿ ಪಿಟಿಸಿ ಆವರಣದಲ್ಲಿ ಇಲಾಖೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊರೊನಾ ಸೋಂಕಿಗೆ ತುತ್ತಾಗಿದ್ದ ಇನ್ಸ್ಪೆಕ್ಟರ್ ಎಸ್.ಎಂ.ಯಾಳಗಿ ಕಳೆದೊಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ನಿನ್ನೆ ಬೆಳಗ್ಗೆ 9-45ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊರೊನಾದಿಂದ ಮೃತಪಟ್ಟ ಇನ್ಸ್ಪೆಕ್ಟರ್ಗೆ ಶ್ರದ್ಧಾಂಜಲಿ - Inspector sm yalagi
ಕೊರೊನಾ ಸೋಂಕಿಗೆ ತುತ್ತಾಗಿದ್ದ ಇನ್ಸ್ಪೆಕ್ಟರ್ ಎಸ್.ಎಂ.ಯಾಳಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ನಗರದ ಪಿಟಿಸಿ ಕವಾಯತ್ ಮೈದಾನದಲ್ಲಿ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೊರೊನಾದಿಂದ ಮೃತಪಟ್ಟ ಇನ್ಸ್ಪೆಕ್ಟರ್ಗೆ ಶ್ರದ್ಧಾಂಜಲಿ ಸಲ್ಲಿಕೆ
ಈ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಇಂದು ಪಿಟಿಸಿ ಕವಾಯತು ಮೈದಾನದಲ್ಲಿ ಮೌನಾಚರಣೆ ಮೂಲಕ ಮೃತ ಅಧಿಕಾರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಪಿಟಿಸಿ ಎಸ್ಪಿ ಯಡಾ ಮಾರ್ಟಿನ್, ನಗರ ಡಿಸಿಪಿ ಕಿಶೋರಬಾಬು ಸೇರಿದಂತೆ ಡಿವೈಎಸ್ಪಿ, ಎಸಿಪಿ, ಪಿಐಗಳು, ಸಿಬ್ಬಂದಿ ಪಾಲ್ಗೊಂಡು ಮೃತರಿಗೆ ನಮನ ಸಲ್ಲಿಸಿದರು.