ಕಲಬುರಗಿ:ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಊಟೋಪಹಾರ ಸಿಗದೆ ಕಂಗಾಲಾದ ಬಡ ರೈಲ್ವೆ ಪ್ರಯಾಣಿಕರಿಗೆ ಕಲಬುರಗಿ ರೈಲ್ವೆ ಪೊಲೀಸರು ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಿದರು.
ಪ್ರಯಾಣಿಕರಿಗೆ ಉಚಿತ ಆಹಾರ ವಿತರಿಸಿದ ಕಲಬುರಗಿ ರೈಲ್ವೆ ಪೊಲೀಸರು - ಕಲಬುರಗಿ ಸುದ್ದಿ,
ಕಲಬುರಗಿ ರೈಲ್ವೆ ಪೊಲೀಸರು ಪ್ರಯಾಣಿಕರಿಗೆ ಉಚಿತ ಆಹಾರ ನೀಡಿ ಮಾನವೀಯತೆ ಮೆರೆದರು.
ರೈಲ್ವೇ ಪ್ರಯಾಣಿಕರಿಗೆ ಉಚಿತ ಆಹಾರ ನೀಡಿದ ಪೊಲೀಸರು
ರೈಲ್ವೆ ಡಿವೈಎಸ್‌ಪಿಗಳಾದ ವೆಂಕಣ್ಣಗೌಡ ಪಾಟೀಲ್ ಮತ್ತು ವಿ.ಎನ್ ಪಾಟೀಲ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಬಡ ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳನ್ನು ನೀಡಲಾಯಿತು.
ರೈಲ್ವೆ ಇಲಾಖೆಯ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.