ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಉಲ್ಲಂಘಿಸಿದವರಿಗೆ ಯೋಗಾಸನ ಮಾಡಿಸಿದ ಪೊಲೀಸರು - kalburgi different punishment

ಲಾಕ್​ಡೌನ್ ಉಲ್ಲಂಘಿಸಿದವರಿಗೆ ಈಗಾಗಲೇ ಬಸ್ಕಿ, ಕಸ ಗುಡಿಸುವ ಶಿಕ್ಷೆ ಕೊಟ್ಟಿದ್ದ ಪೊಲೀಸರು ಇದೀಗ 15 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಮಾಡಿಸಿ ಬಿಸಿ ಮುಟ್ಟಿಸಿದ್ದಾರೆ.

police Gave Different punishemnt
ಯೋಗಾಸನ ಮಾಡಿಸಿದ ಪೊಲೀಸರು

By

Published : Apr 4, 2020, 3:47 PM IST

ಕಲಬುರಗಿ : ಕೊರೊನಾ ತಡೆಗಟ್ಟಲು ಭಾರತ್ ಲಾಕ್ ಡೌನ್ ಮಾಡಿದ್ದರೂ ಕೂಡ ನಗರದಲ್ಲಿ ಅನಗತ್ಯ ಓಡಾಡುತ್ತಿದ್ದ ಬೈಕ್​​ ಸವಾರರಿಗೆ ಪೊಲೀಸರು ಯೋಗಾಸನ ಮಾಡಿಸಿ ವಿಭಿನ್ನ ಶಿಕ್ಷೆ ಕೊಟ್ಟಿದ್ದಾರೆ.

ಲಾಕ್​ಡೌನ್ ಉಲ್ಲಂಘಿಸಿದವರಿಗೆ ಈಗಾಗಲೇ ಬಸ್ಕಿ, ಕಸ ಗುಡಿಸುವ ಶಿಕ್ಷೆ ಕೊಟ್ಟಿದ್ದ ಪೊಲೀಸರು ಇದೀಗ 15 ನಿಮಿಷಗಳ ಕಾಲ ಕಪಾಲಭಾತಿ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿಸುತ್ತಿದ್ದಾರೆ.

ನಗರದ ಗಂಜ್ ಚೌಕ್ ಪೊಲೀಸ್ ಔಟ್ ಪೋಸ್ಟ್ ಮುಂಭಾಗದ ರಸ್ತೆ ಮೇಲೆ ಯೋಗಾಸನದ ಶಿಕ್ಷೆ ಜೊತೆಗೆ ಕ್ಯಾಂಡಲ್ ಕೊಟ್ಟು ಪೊಲೀಸರು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.

ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲಿಯೇ ಉಳಿದು ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿ ಕರೆಯಂತೆ ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ನಮ್ಮ ಮನೆಯಲ್ಲಿಯೇ ದೀಪ ಬೆಳಗಿಸುತ್ತೇವೆಂದು ಸವಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನಂತ್ರ, ದಂಡ ಹಾಕಿ ಬೈಕ್ ಕೊಟ್ಟು ಕಳಿಸಿದ್ದಾರೆ.

ABOUT THE AUTHOR

...view details