ಕಲಬುರಗಿ: ದೇಶದಾದ್ಯಂತ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಹಿನ್ನೆಲೆ ಕಲಬುರಗಿಯಲ್ಲಿ ಪೊಲೀಸರು ವಾಹನಗಳ ರೂಟ್ ಮಾರ್ಚ್ ನಡೆಸುವ ಮೂಲಕ ಮನೆಯಿಂದ ಯಾರೂ ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ.
ಮನೆಯಿಂದ ಯಾರೂ ಹೊರ ಬಾರದಂತೆ ಕಲಬುರಗಿಯಲ್ಲಿ ಪೊಲೀಸರಿಂದ ಎಚ್ಚರಿಕೆ - ಡಿಸಿಪಿ ಕಿಶೋರ್ ಬಾಬು
ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಲಾಕ್ಡೌನ್-2 ಇಂದಿನಿಂದ ಪ್ರಾರಂಭವಾಗಿದೆ. ಕಲಬುರಗಿಯಲ್ಲಿ ಡಿಸಿಪಿ ಕಿಶೋರ್ ಬಾಬು ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಿದ ಪೊಲೀಸರು, ನಗರದಾದ್ಯಂತ ಗಲ್ಲಿ ಗಲ್ಲಿಯಲ್ಲಿಯೂ ಜನತೆಗೆ ಮನೆಗಳಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ.
ಮನೆಯಿಂದ ಯಾರು ಹೊರಬಾರದಂತೆ ಕಲಬುರಗಿಯಲ್ಲಿ ಪೊಲೀಸರಿಂದ ರೂಟ್ ಮಾರ್ಚ್
ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಲಾಕ್ಡೌನ್-2 ಇಂದಿನಿಂದ ಪ್ರಾರಂಭವಾಗಿದೆ. ಕಲಬುರಗಿಯಲ್ಲಿ ಡಿಸಿಪಿ ಕಿಶೋರ್ ಬಾಬು ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಿದ ಪೊಲೀಸರು, ನಗರದಾದ್ಯಂತ ಗಲ್ಲಿ ಗಲ್ಲಿಯಲ್ಲಿಯೂ ಜನತೆಗೆ ಮನೆಗಳಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಕಟ್ಟೆಚ್ಚರ ವಹಿಸಿದ್ದಾರೆ.
ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗುವವರಿಗೆ ಪೊಲೀಸರಿಂದ ಲಾಠಿ ರುಚಿ ತೋರಿಸುವುದರ ಜೊತೆಗೆ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ.