ಕಲಬುರಗಿ:ಗೆಳೆಯನ ಬಳಿಯಿದ್ದ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ಸ್ನೇಹಿತರನ್ನು ಎಂಬಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಮ್ ಡಿ ಗೌಸ್, ಅಬಿಬುರ ರಹಿಮಾನ್, ಕರಂ ಅನ್ವರ್, ಸರ್ಪ ರಾಜ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ದೊಚ್ಚಿದ್ದ 1ಲಕ್ಷದ 17 ಸಾವಿರ ನಗದು ಹಣ, 5 ಗ್ರಾಮ ಚಿನ್ನದ ರಿಂಗ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಎಮ್.ಡಿ ಗೌಸ್ ತನ್ನ ಸ್ನೇಹಿತನಾದ ಪಾನಿಪುರಿ ವ್ಯಾಪಾರಿ, ಗುಬ್ಬಿ ಕಾಲೋನಿ ನಿವಾಸಿ ಪುಪ್ಪೇಂದ್ರ ಸಿಂಗ್ ಎಂಬಾತನನ್ನು ನಗರದ ಬಾರಾ ಹಿಲ್ಸ್ ಬಳಿ ಫೋನ್ ಮಾಡಿ ಕರೆಸಿಕೊಂಡಿದ್ದನು. ಬಳಿಕ ಇತರೆ ಮೂವರ ಸಹಾಯದಿಂದ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.