ಕಲಬುರಗಿ: ಲಾಕ್ಡೌನ್ ಉಲ್ಲಂಘಿಸಿರುವ ಹಲವರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ನಗರದ ರೋಜಾ ಪ್ರದೇಶದಲ್ಲಿ ಸಂಚರಿಸಿದ ಪೊಲೀಸರು, ಅಂಗಡಿ ಮತ್ತು ಹೋಟೆಲ್ಗಳನ್ನು ತೆರೆದಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬೇಕಾಬಿಟ್ಟಿ ಅಡ್ಡಾಡುತ್ತಿದ್ದವರನ್ನೂ ಬಂಧಿಸಿದ್ದಾರೆ.
ಕಲಬುರಗಿ: ಲಾಕ್ಡೌನ್ ಉಲ್ಲಂಘಿಸಿದವರನ್ನು ಬಂಧಿಸಿದ ಪೊಲೀಸರು - ಕೊರೊನಾ ಲೆಟೆಸ್ಟ ನ್ಯೂಸ್
ಲಾಕ್ಡೌನ್ ಆದೇಶ ಜಾರಿಯಾಗಿದ್ದರೂ ನಗರದಲ್ಲಿ ಹೋಟೆಲ್ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಕಲಬುರಗಿ: ಲಾಕ್ಡೌನ್ ಉಲ್ಲಂಘಿಸಿದವರನ್ನು ಬಂಧಿಸಿದ ಪೊಲೀಸರು
ಲಾಕ್ಡೌನ್ ನಡುವೆಯೂ ಹೋಟೆಲ್ ತೆಗೆದವರನ್ನು ಬಂಧಿಸಿದ್ದು, ರೋಜಾ ಪ್ರದೇಶದಲ್ಲಿ ಒಟ್ಟು ಒಂಭತ್ತು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ರುಕ್ಮೋದ್ದೀನ್, ಸತ್ತಾರ್ ಬಾಬುಮಿಯ್ಯಾ, ಶೇಖ್ ರಹೀಂ, ಜಾಹೀದ್ ಹಮೀದ್, ಮಹ್ಮದ್ ಸಲೀಂ, ಶಫೀ ಅಬ್ದುಲ್ ಮಿಯ್ಯಾ, ಮಹ್ಮದ್ ಅಯೂಬ್, ಜಿಸ್ಯಾನ್, ಯೂನಸ್ ನೂರ್ ಪಾಷಾ ಎಂದು ಗುರುತಿಸಲಾಗಿದೆ.