ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಅಂತಾರಾಜ್ಯ ಬೈಕ್ ಕಳ್ಳರ ಬಂಧನ - Kalburgi crime latest news

ಹೈದರಾಬಾದಿನಲ್ಲಿ ಬೈಕ್ ಕಳ್ಳತನ ಮಾಡಿ ಕಲಬುರಗಿಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

Bike thiesves
Bike thiesves

By

Published : Aug 23, 2020, 4:28 PM IST

ಕಲಬುರಗಿ:ಹೈದರಾಬಾದ್‌ನಲ್ಲಿ ಬೈಕ್ ಕದ್ದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಚೌಧರಿ (25), ಜೀಲಾನಿ (23), ಮಹಮ್ಮದ್ ಸೋಯಲ್ ಚೌಧರಿ (25) ಬಂಧಿತ ಆರೋಪಿಗಳು. ಇವರಲ್ಲಿ ಇಬ್ಬರು ಹೈದ್ರಾಬಾದ್ ಮೂಲದವರಾಗಿದ್ದು, ಮಹಮ್ಮದ್ ಸೋಯಲ್ ಚೌಧರಿ ಜಿಲ್ಲೆಯ ಬಂದರವಾಡ ಗ್ರಾಮದವನಾಗಿದ್ದಾನೆ.

ತೆಲಂಗಾಣದ ಹೈದರಾಬಾದಿನಲ್ಲಿ ಗ್ಯಾರೇಜ್ ಇಟ್ಟಿರುವ ಖದೀಮರು, ಅಲ್ಲಿ ಬೈಕ್‌ಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಸೋಯಲ್ ಸಹಾಯದಿಂದ ಬೈಕ್‌ಗಳನ್ನು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಕದ್ದ ಬೈಕ್ ಗಳನ್ನು ಮಾರಾಟಕ್ಕೆಂದು ಬಂದಾಗ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.

ಬಂಧಿತರಿಂದ ಮೂರುವರೆ ಲಕ್ಷ ಮೌಲ್ಯದ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details