ಕರ್ನಾಟಕ

karnataka

ETV Bharat / state

ನೆಲಕ್ಕೆ ಬಿದ್ದ ಪಕ್ಷದ ಕಾರ್ಯಕರ್ತನ ಊರುಗೋಲು ಎತ್ತಿಕೊಟ್ಟ ಪ್ರಧಾನಿ ಮೋದಿ - ಪ್ರಧಾನಿ ಮೋದಿ

ಕಲಬುರಗಿ ನಗರದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು.

PM Modi
ಕಾರ್ಯಕರ್ತನ ಉರುಗೋಲು ಎತ್ತಿಕೊಟ್ಟ ಪ್ರಧಾನಿ ಮೋದಿ

By

Published : May 3, 2023, 10:25 AM IST

ಕಲಬುರಗಿ:ವಿಧಾನಸಭೆ ಚುನಾವಣೆಗೆ ನಡೆಯುವ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಲ್ಯಾಣ ನಾಡಿನಲ್ಲಿ ಪ್ರಧಾನಿ ಮೋದಿ ಭರ್ಜರಿ‌ ಪ್ರಚಾರ ಕೈಗೊಂಡರು. ಮಂಗಳವಾರ ಸಂಜೆ ನಗರದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರ ಮತಬೇಟೆ ನಡೆಸಿದರು. ಕಲಬುರಗಿಗೆ ಆಗಮಿಸಿದ ಮೋದಿ ಸ್ವಾಗತಕ್ಕೆ ಬಂದಿದ್ದ ಪಕ್ಷದ ಹಿರಿಯ ಕಾರ್ಯಕರ್ತರ ಊರುಗೋಲು‌ ನೆಲಕ್ಕೆ ಬಿದ್ದಾಗ ಖುದ್ದು ಮೋದಿ ಅವರೇ ಅದನ್ನು ತೆಗೆದುಕೊಟ್ಟರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರದ ಡಿಎಆರ್ ಮೈದಾನಕ್ಕೆ ಹೆಲಿಕಾಪ್ಟರ್ ಮುಖಾಂತರ ಬಂದಿಳಿದರು. ಮೋದಿ‌ ಸ್ವಾಗತಕ್ಕೆ ಮಹಾಪೌರ ವಿಶಾಲ ದರ್ಗಿ, ಬಿಜೆಪಿ ಹಿರಿಯ ಕಾರ್ಯಕರ್ತ ವಿಜಯಕುಮಾರ ಸೇವಲಾನಿ ಸೇರಿ ಇತರರು ಹೆಲಿಪ್ಯಾಡ್​ಗೆ ಬಂದಿದ್ದರು. ಮೋದಿ ಆಗಮಿಸುತ್ತಿದ್ದಂತೆ ಗಣ್ಯರು ಶುಭ ಕೋರಿದರು. ಈ ವೇಳೆ ಸೇವಲಾನಿ‌ ಅವರ ಕೈಯಲ್ಲಿದ್ದ ಊರುಗೋಲು ನೆಲಕ್ಕೆ ಬಿತ್ತು. ಯಾವುದನ್ನೂ ಲೆಕ್ಕಿಸದೆ ಮೋದಿ ತಾವೇ ನೇಲಕ್ಕೆ‌ ಬಿದ್ದ ಊರುಗೋಲು ತೆಗೆದುಕೊಂಡು ಸೇವಲಾನಿ ಅವರ ಕೈಗಿತ್ತರು. ಪಕ್ಕದಲ್ಲಿದ್ದ ಮೇಯರ್ ದರ್ಗಿ ಕೂಡಾ ಮೋದಿ ಊರುಗೋಲು ತೆಗೆದುಕೊಳ್ಳುವಾಗ ಸಹಾಯಕ್ಕೆ ಮುಂದಾದರು. ಮೂಳೆ ಮುರಿದುಕೊಂಡ ನಿಮಗೆ ಊರುಗೋಲು ಸಹಾಯ ಅತ್ಯಗತ್ಯ. ಎಚ್ಚರಿಕೆಯಿಂದಿರಿ ಎಂದು ಪ್ರಧಾನಿ ಸಲಹೆ ನೀಡಿದರು.

ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಖರ್ಗೆ ತವರಿನಲ್ಲಿ ಮೋದಿ ಮತಬೇಟೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯ ದಕ್ಷಿಣ ಮತ್ತು ಉತ್ತರ ಮತಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮೋದಿ ಮತಯಾಚಿಸಿದರು. ತೆರೆದ ವಾಹನದಲ್ಲಿ ಗಂಜ್ ಪ್ರದೇಶ, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್‌ನಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೂ ರೋಡ್‌ ಶೋ ನಡೆಸಿದರು.

ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ

ಇಂದು ಮೋದಿ ಕ್ಯಾಂಪೇನ್:ನರೇಂದ್ರ ಮೋದಿ ಇಂದು ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸುವರು. ಬೆಳಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಉತ್ತರ ಕನ್ನಡ ಜಿಲ್ಲೆಗೆ ತೆರಳಿ ಅಂಕೋಲಾದಲ್ಲಿ ಮಧ್ಯಾಹ್ನ 1.15 ಗಂಟೆಗೆ ಜರುಗಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ 3.45ಕ್ಕೆ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಪ್ರಧಾನಿ ಮೋದಿ: ಇಂದು ಎಲ್ಲೆಲ್ಲಿ ಮತಬೇಟೆ?

ABOUT THE AUTHOR

...view details