ಸೇಡಂ :ಕೊರೊನಾವನ್ನ ಸರಿಯಾದ ರೀತಿಯಲ್ಲಿ ನಿರ್ವಹಿಸದ ಕಾರಣ ಆಗುತ್ತಿರುವ ಅವ್ಯವಸ್ಥೆಯನ್ನಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಮತ್ತು ಜಿಲ್ಲಾಡಳಿತ ವೈಫಲ್ಯದಿಂದ ದೊಡ್ಡ ಮಟ್ಟದ ಸಾವುಗಳಾಗುತ್ತಿವೆ.
ಮಾಹಿತಿ ಇದ್ದರೂ ಸಹ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ. ಎರಡನೇ ಅಲೆ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪಾಟೀಲ ಆರೋಪಿಸಿದರು.
ದಿನನಿತ್ಯ ಕಲಬುರಗಿ ಮತ್ತು ಸೇಡಂನಿಂದ ನೂರಾರು ಕರೆಗಳು ಬರುತ್ತಿವೆ. ಪ್ರಯತ್ನ ಮೀರಿ ಬೆಡ್ ಕೊಡಿಸಿದ್ದೇನೆ, ಸಾಧ್ಯವಾದಷ್ಟು ಜನರಿಗೆ ನೆರವಾಗುತ್ತಿದ್ದೇನೆ. ಆದರೆ, ಪರಿಸ್ಥಿತಿ ಕೈಮೀರಿದೆ. ನಾನೂ ಸಹ ಅಸಹಾಯಕನಾಗಿದ್ದೇನೆ ಎಂದ್ರು.
ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಸೋಂಕಿತರು ಕಂಡು ಬರುತ್ತಿದ್ದಾರೆ. ಪಿಎಂ ಕೇರ್ ಅಡಿ ಪ್ರತಿ ತಾಲೂಕಿಗೆ 5-6 ವೆಂಟಿಲೇಟರ್ ನೀಡಲಾಗಿದೆ. ಬಹುತೇಕ ವೆಂಟಿಲೇಟರ್‌ಗಳು ಕಳಪೆ ಗುಣಮಟ್ಟದ್ದಾಗಿವೆ. ಇತ್ತೀಚೆಗೆ ಅಫಜಲಪುರದಿಂದ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ನೀಡಿದ ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ.
ಇನ್ನುಳಿದ ಕಡೆ ಇರುವ ವೆಂಟಿಲೇಟರ್‌ಗಳ ಬಳಕೆಯಾಗುತ್ತಿಲ್ಲ. ಇದೆಲ್ಲಾ ಯಾರ ಜವಾಬ್ದಾರಿ?, ಯಾರು ವ್ಯವಸ್ಥೆ ಸರಿಪಡಿಸೋರು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.